ಶ್ರೀಲಂಕಾದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 56 ಕ್ಕೆ ಏರಿದ್ದು, ಅಗತ್ಯ ಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ, ಉಳಿದ ಜನರಿಗೆ ಶುಕ್ರವಾರ ಸಾರ್ವಜನಿಕ ರಜೆ ಘೋಷಿಸಲಾಗಿದ್ದು, 21 ಜನರು ನಾಪತ್ತೆಯಾಗಿರುವ ಮಾಹಿತಿ ಇದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಕಳೆದ 72 ಗಂಟೆಗಳಲ್ಲಿ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (ಡಿಎಂಸಿ) ತಿಳಿಸಿದೆ. ಚಂಡಮಾರುತವು ಪೂರ್ವ ಶ್ರೀಲಂಕಾದ ತ್ರಿಕೋನಮಲಿ ಜಿಲ್ಲೆಯ ಬಳಿ ಇದ್ದು, ಉತ್ತರ ಮತ್ತು ವಾಯುವ್ಯ ಕಡೆಗೆ ಚಲಿಸುತ್ತಿತ್ತು ಎಂದು ಹವಾಮಾನ ಇಲಾಖೆ ಶುಕ್ರವಾರ ಬೆಳಿಗ್ಗೆ ತಿಳಿಸಿದೆ(ಏಜೆನ್ಸೀಸ್).