ಮಂಗಳವಾರ ಬೆಳಗ್ಗೆ 11:25ಕ್ಕೆ ಭಾರತದ ಧ್ವಜ ಹೊತ್ತ 'ನಂದಾದೇವಿ'(Nanda Devi) ನೌಕೆಯು ಗುಜರಾತ್‌ನ ವಾದಿನಾರ್ ಬಂದರಿಗೆ ಬಂದಿಳಿಯಿತು. ಇದಕ್ಕೂ ಒಂದು ದಿನ ಮೊದಲು ಅಂದರೆ ಸೋಮವಾರ ಸಂಜೆ, ಸುಮಾರು 46,000 ಟನ್ ಎಲ್‌ಪಿಜಿ ಹೊತ್ತ 'ಶಿವಲಿಕ್' ನೌಕೆಯು ಮುದ್ರಾ ಬಂದರನ್ನು ತಲುಪಿತ್ತು. ಕತಾರ್‌ನಿಂದ ಹೊರಟಿದ್ದ ಈ ನೌಕೆಗಳು ಕಳೆದ ಒಂಬತ್ತು ದಿನಗಳಿಂದ ಯುದ್ಧ ಪೀಡಿತ ಸಮುದ್ರ ಮಾರ್ಗದಲ್ಲಿ ಸಂಚರಿಸಿ ಭಾರತಕ್ಕೆ ಬಂದಿವೆ.