ಜನರ ಸೇವಗೆ ಸಿದ್ಧವಾಗಿರುವ ಬುಲೆಟ್ ರೈಲು, 2027ರಲ್ಲಿ ಭಾರತದಲ್ಲಿ ಸಂಚಾರ ನಡೆಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧಿಕೃತವಾಗಿ ಘೋಷಿಸಿದರು. "ಆಗಸ್ಟ್ 15, 2027ರಂದು ಭಾರತದ ಮೊದಲ ಬುಲೆಟ್ ರೈಲು ಸಿದ್ಧವಾಗಲಿದೆ. ಆರಂಭದಲ್ಲಿ ಸೂರತ್ನಿಂದ ಬಿಲಿಮೋರಾಗೆ ಸೇವೆಗಳು ಶುರುವಾಗಲಿದ್ದು, ನಂತರದಲ್ಲಿ ವಾಪಿಯಿಂದ ಸೂರತ್, ಅಹಮದಾಬಾದ್, ಥಾಣೆಯಿಂದ ಅಹಮದಾಬಾದ್ಗೆ. ಅಂತಿಮವಾಗಿ, ಮುಂಬೈನಿಂದ ಅಹಮದಾಬಾದ್ಗೆ ಸೇವೆಗಳು ಇರಲಿವೆ" ಎಂದು ತಿಳಿಸಿದರು.