ವಿಜ್ಞಾನ ಮತ್ತು ಕಲೆಯ ವಿಶಿಷ್ಟ ಸಮ್ಮಿಲನವಾಗಿರುವ ಈ ಮಿಷನ್‌ನಲ್ಲಿ, ಭಾರತದ ಹೆಮ್ಮೆಯ ವಿಜ್ಞಾನಿಗಳಾದ ಡಾ. ವಿಕ್ರಮ್ ಸಾರಾಭಾಯ್, ಸರ್ ಸಿ.ವಿ. ರಾಮನ್ ಮತ್ತು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕಿರು ಶಿಲ್ಪಗಳನ್ನು ಒಳಗೊಂಡ ಸಣ್ಣ ಚಿನ್ನದ ರಾಕೆಟ್ ಅನ್ನು ಕಳುಹಿಸಲಾಗುತ್ತಿದೆ. ಇದೆಲ್ಲದರ ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರ 'ವಂದೇ ಮಾತರಂ' ಎಂಬ ಸಂದೇಶ ಮತ್ತು ಶುಭ ಹಾರೈಕೆಗಳ ಕಾರ್ಡ್ ಹಾಗೂ ಪ್ರಪಂಚದಾದ್ಯಂತದ ನೂರಾರು ಬೆಂಬಲಿಗರ ಗ್ರೀಟಿಂಗ್ಸ್‌ಗಳನ್ನು ಹೊತ್ತೊಯ್ಯುವ ಮೂಲಕ, ಈ ಮಿಷನ್ ಭಾರತದ ಬೆಳೆಯುತ್ತಿರುವ ಬಾಹ್ಯಾಕಾಶ ಮಹತ್ವಾಕಾಂಕ್ಷೆಯನ್ನು ದೇಶದ ನಾಗರಿಕರ ಆಶಯಗಳೊಂದಿಗೆ ಭಾವನಾತ್ಮಕವಾಗಿ ಜೋಡಿಸಿದೆ, (ಏಜೆನ್ಸೀಸ್).