ಸಿಇಸಿ ರಕ್ಷಣೆ ಕಾಯ್ದೆ ರದ್ದತಿಗೆ ಪ್ರತಿಪಕ್ಷಗಳ ಸುಪ್ರೀಂ ಪ್ಲಾನ್!....ಒಕ್ಕೂಟ ವಿಸ್ತರಣೆಗೆ ಮತ್ತೊಂದು ಪಕ್ಷಕ್ಕೆ ಆಹ್ವಾನ ನೀಡಿದ ಮಮತಾ ಬ್ಯಾನರ್ಜಿ | INDIA Bloc

INDIA Bloc: ಮತದಾರರ ಪಟ್ಟಿಯ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಜಂಟಿ ಹೋರಾಟದ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಲು ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು ಬುಧವಾರ ಸಭೆ ನಡೆಸಿದರು. ಮೂಲಗಳ ಪ್ರಕಾರ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಇಂಡಿಯಾ ಒಕ್ಕೂಟವನ್ನು ವಿಸ್ತರಿಸಬೇಕು ಹಾಗೂ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ಯಂತಹ ಪಕ್ಷಗಳನ್ನು ತಲುಪಬೇಕು ಎಂದು ಸಲಹೆ ನೀಡಿದರು.
ಸಿಇಸಿ ರಕ್ಷಣೆ ಕಾಯ್ದೆ ರದ್ದತಿಗೆ ಪ್ರತಿಪಕ್ಷಗಳ ಸುಪ್ರೀಂ ಪ್ಲಾನ್!....
ಸಿಇಸಿ ರಕ್ಷಣೆ ಕಾಯ್ದೆ ರದ್ದತಿಗೆ ಪ್ರತಿಪಕ್ಷಗಳ ಸುಪ್ರೀಂ ಪ್ಲಾನ್!....
Published on: 

INDIA Bloc: ಮತದಾರರ ಪಟ್ಟಿಯ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಜಂಟಿ ಹೋರಾಟದ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಲು ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು ಬುಧವಾರ ಸಭೆ ನಡೆಸಿದರು. ಮೂಲಗಳ ಪ್ರಕಾರ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಇಂಡಿಯಾ ಒಕ್ಕೂಟವನ್ನು ವಿಸ್ತರಿಸಬೇಕು ಹಾಗೂ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ಯಂತಹ ಪಕ್ಷಗಳನ್ನು ತಲುಪಬೇಕು ಎಂದು ಸಲಹೆ ನೀಡಿದರು.

ತಾವು ಬಿಜಿಡಿ ನಾಯಕರೊಬ್ಬರ ಜೊತೆ ಮಾತನಾಡಿದ್ದು, ಆ ಪಕ್ಷವೂ ಬಿಜೆಪಿಯ ನೀತಿಗಳನ್ನು ವಿರೋಧಿಸುತ್ತಿದೆ ಎಂಬ ಸೂಚನೆ ನೀಡಿದೆ ಎಂದು ಮಮತಾ ಸಭೆಗೆ ತಿಳಿಸಿದರು ಎಂದು ವರದಿಯಾಗಿದ್ದು, ವಿರೋಧ ಪಕ್ಷಗಳ ಸಮನ್ವಯವನ್ನು ಬಲಪಡಿಸುವ ಕುರಿತ ಚರ್ಚೆಯ ಸಮಯದಲ್ಲಿ ಈ ಸಲಹೆ ಬಂದಿದೆ.

ಸಿಇಸಿ ಇಮ್ಯುನಿಟಿ ಕಾಯ್ದೆ ವಿರುದ್ಧ ಅರ್ಜಿ ಸಲ್ಲಿಸಲು 'ಇಂಡಿಯಾ' ಒಕ್ಕೂಟ ತೀರ್ಮಾನ

ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರಿಗೆ ಕಾನೂನಾತ್ಮಕ ವಿನಾಯಿತಿ ನೀಡುವ ಕಾಯ್ದೆಯ ವಿರುದ್ಧ ಅರ್ಜಿ ಸಲ್ಲಿಸಲು ಇಂಡಿಯಾ ಒಕ್ಕೂಟ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಈ ಕಾಯ್ದೆಯನ್ನು ಪ್ರಶ್ನಿಸುವ ಸಲಹೆಯನ್ನು ಹಿರಿಯ ವಕೀಲ ಹಾಗೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ನೀಡಿದ್ದು, ಸಭೆಯಲ್ಲಿದ್ದ ನಾಯಕರು ಈ ಪ್ರಸ್ತಾವನೆಗೆ ಸಮ್ಮತಿಸಿದ್ದಾರೆ. ಇದರ ಜೊತೆಗೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತಾಗಿಯೂ ಸಭೆಯಲ್ಲಿ ಚರ್ಚಿಸಲಾಯಿತು. ಜ್ಞಾನೇಶ್‌ ಕುಮಾರ್‌ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಕೋರಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಸ್ತಾಪ ಮಂಡಿಸಲು ಹೊಸ ನೋಟಿಸ್‌ ಕರಡು ಸಿದ್ಧವಾಗಿದ್ದು, ಅನುಮೋದನೆಗಾಗಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಎಸ್‌‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೇ ಈ ಸಭೆ ನಡೆದಿದೆ. ಮೋದಿ ಸರ್ಕಾರ ಹಾಗೂ ಚುನಾವಣಾ ಆಯೋಗದ ಮೂಲಕ ನಡೆಸಲಾಗುತ್ತಿದೆ ಎನ್ನಲಾದ ವೋಟ್ ಚೋರಿ ಗೇಮ್ ಪ್ಲಾನ್ ಮತ್ತು ಸಂವಿಧಾನದ ಮೇಲಿನ ಸರಣಿ ದಾಳಿಗಳಿಂದ ಸಂವಿಧಾನವನ್ನು ರಕ್ಷಿಸಲು ವಿರೋಧ ಪಕ್ಷಗಳು ಒಗ್ಗಟ್ಟಾಗಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಅಸ್ತಿತ್ವಕ್ಕಾಗಿ ನಡೆಯಲಿರುವ ಹೋರಾಟ ಎಂದ ರಾಹುಲ್ ಗಾಂಧಿ

ಮೂಲಗಳ ಪ್ರಕಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆಯಲ್ಲಿ ಮಾತನಾಡಿ, ಇದು ಸಾಮಾನ್ಯ ಹೋರಾಟವಲ್ಲ, ವಿರೋಧ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಾಗಿದೆ ಎಂದು ಹೇಳಿದರು. ರಾಜಕೀಯ ಹೋರಾಟದಲ್ಲಿ ಅಂತಿಮ ಕದನದತ್ತ ಸಾಗುವ ಬಗ್ಗೆಯೂ ರಾಹುಲ್​ ಮಾತನಾಡಿದ್ದಾರೆ.

ಅಸ್ತಿತ್ವಕ್ಕಾಗಿ ನಡೆಯಲಿರುವ ಹೋರಾಟ ಎಂದ ರಾಹುಲ್ ಗಾಂಧಿ
ಅಸ್ತಿತ್ವಕ್ಕಾಗಿ ನಡೆಯಲಿರುವ ಹೋರಾಟ ಎಂದ ರಾಹುಲ್ ಗಾಂಧಿ KARMA

ರಾಹುಲ್ ಗಾಂಧಿ ಅವರು ಇಂಡಿಯಾ ಒಕ್ಕೂಟದ ನಾಯಕರನ್ನು ಭಾರತೀಯ ಸಂವಿಧಾನದ ಸಾಮೂಹಿಕ ರಕ್ಷಕರು ಎಂದು ಕರೆದಿದ್ದು, ಮೂರೂವರೆ ಗಂಟೆಗಳ ಕಾಲ ನಡೆದ ಜಂಟಿ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತೀಯ ಪ್ರಜಾಪ್ರಭುತ್ವವನ್ನು ನಾಶಪಡಿಸಿದವರಿಗೆ ಶಿಕ್ಷೆಯಾಗುವುದನ್ನು ಖಚಿತಪಡಿಸುವುದು ಇಂಡಿಯಾ ಒಕ್ಕೂಟದ ಎಲ್ಲಾ ನಾಯಕರ ವೈಯಕ್ತಿಕ ಬದ್ಧತೆಯಾಗಿದೆ ಎಂದರು. ಅಲ್ಲದೆ, ದೇಶದ ಪ್ರಜಾಪ್ರಭುತ್ವವು, ಎಲ್ಲಕ್ಕಿಂತ ದೊಡ್ಡದು ಎಂದರು.

ಚುನಾವಣೆ ಒಂದು ಪ್ರಹಸನ!...

ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಚುನಾವಣೆಯನ್ನು ಒಂದು ಪ್ರಹಸನ ಎಂದು ಕರೆದಿದ್ದು, ಎಸ್‌ಐಆರ್ ಪ್ರಕ್ರಿಯೆ ಮತ್ತು ಜಂಟಿ ಹೋರಾಟದ ಕುರಿತು ವಿಪಕ್ಷ ನಾಯಕರ ಚರ್ಚೆಯ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.

ಸಭೆಗೂ ಮುನ್ನ ಮಾತನಾಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಪ್ರಜಾಪ್ರಭುತ್ವ ಉಳಿಸಿ ಎಂಬ ಬೃಹತ್ ಚಳವಳಿಯನ್ನು ನಡೆಸಲು ಕಾಂಗ್ರೆಸ್ ಬಯಸಿದೆ ಎಂದು ಹೇಳಿದ್ದರು. ಮುಂದಿನ ಹೋರಾಟದ ಸ್ಪಷ್ಟ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸುವ ಮೊದಲು ಇಂಡಿಯಾ ಒಕ್ಕೂಟದ ನಾಯಕರ ಸಲಹೆಗಳನ್ನು ಪರಿಗಣಿಸಲಾಗುವುದು ಎಂದೂ ಅವರು ತಿಳಿಸಿದ್ದರು.

ನಾನೇ ತುಂಬಾ ಒತ್ತಡದಲ್ಲಿದ್ದೇನೆ ಎಂದ ಮಮತಾ ಬ್ಯಾನರ್ಜಿ

ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ತಾವೇ ಅತಿ ಹೆಚ್ಚು ಕಷ್ಟ ಅನುಭವಿಸುತ್ತಿರುವುದಾಗಿ ಮಮತಾ ಬ್ಯಾನರ್ಜಿ ಸಭೆಯಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಸ್ಪಂದಿಸಿದ ಮಲ್ಲಿಕಾರ್ಜುನ ಖರ್ಗೆ, ರ‍್ಯಾಲಿಗಳ ನಂತರ ಮಮತಾ ಬ್ಯಾನರ್ಜಿ ಅವರು ಅವಮಾನ ಮತ್ತು ಒತ್ತಡವನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಈ ಸಭೆಯಲ್ಲಿ ಇಂಡಿಯಾ ಒಕ್ಕೂಟದ ಉದ್ದೇಶಿತ ಚಳವಳಿ ಕಾರ್ಯಕ್ರಮ ಮತ್ತು ಕಾಂಗ್ರೆಸ್‌ನ ಪ್ರಚಾರದ ನಡುವೆ ಹೆಚ್ಚಿನ ಸಮನ್ವಯದ ಅಗತ್ಯತೆಯ ಕುರಿತಾಗಿಯೂ ಚರ್ಚಿಸಲಾಯಿತು. ಮಾಹಿತಿ ಪ್ರಕಾರ, ಒಕ್ಕೂಟವು ತನ್ನ ಮೊದಲ ರ‍್ಯಾಲಿಯನ್ನು ನವೆಂಬರ್ 1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಯೋಜಿಸಲು ಯೋಜಿಸುತ್ತಿದ್ದು, ಮುಂಬೈ ಮತ್ತು ಕೋಲ್ಕತ್ತಾದಲ್ಲೂ ಮುಂದಿನ ರ‍್ಯಾಲಿಗಳನ್ನು ನಡೆಸಲು ಪ್ರಸ್ತಾಪಿಸಲಾಗಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net