ರೈಲಿನಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ: ಲಿಪ್‌ಸ್ಟಿಕ್‌ ಬಳಿದು, ಬಳೆ ತೊಡಿಸಿ ಯುವಕನಿಗೆ ತಕ್ಕ ಪಾಠ ಕಲಿಸಿದ 'ವೀರನಾರಿ'; ವಿಡಿಯೋ ವೈರಲ್​! Women Applied Lipstick to Man

ಸಹ ಪ್ರಯಾಣಿಕರ ಸಮ್ಮುಖದಲ್ಲೇ ಆತನಿಗೆ ಲಿಪ್‌ಸ್ಟಿಕ್ ಬಳಿದು, ಬಳೆ ತೊಡಿಸಿದ ವೀರನಾರಿ
ಸಹ ಪ್ರಯಾಣಿಕರ ಸಮ್ಮುಖದಲ್ಲೇ ಆತನಿಗೆ ಲಿಪ್‌ಸ್ಟಿಕ್ ಬಳಿದು, ಬಳೆ ತೊಡಿಸಿದ ವೀರನಾರಿ
Published on

ಪ್ರಮುಖ ಮುಖ್ಯಾಂಶಗಳು

  • ರೈಲಿನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕ
  • ಸಹ ಪ್ರಯಾಣಿಕರ ಸಮ್ಮುಖದಲ್ಲೇ ಆತನಿಗೆ ಲಿಪ್‌ಸ್ಟಿಕ್ ಬಳಿದು, ಬಳೆ ತೊಡಿಸಿದ ವೀರನಾರಿ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ಮಹಾರಾಷ್ಟ್ರ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಜೊತೆ ಕೆಟ್ಟದಾಗಿ ನಡೆದುಕೊಳ್ಳುವ ಸುದ್ದಿಗಳನ್ನು ನಾವು ಕೇಳುತ್ತಲೇ, ನೋಡುತ್ತಲೇ ಇರುತ್ತೆವೆ. ಹೆಚ್ಚಿನ ಪ್ರಕರಣದಲ್ಲಿ ಹೆಣ್ಣು ಮಕ್ಕಳು ಮನಸ್ಸಿನಲ್ಲಿಯೇ ಶಾಪ ಹಾಕಿ ಸುಮ್ಮನಾಗುತ್ತಾರೆ.
ಆದರೆ ಇತ್ತೀಚೆಗೆ ಮಹಾರಾಷ್ಟ್ರದ ರೈಲಿನಲ್ಲಿ ನಡೆದಿರುವ ಘಟನೆಯೊಂದು ದೇಶದ ಗಮನ ಸೆಳೆಯುತ್ತಿದೆ. ಬದ್ನೇರಾ ಮತ್ತು ಅಕೋಲಾ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ, ಆ ಯುವತಿ(Women Applied Lipstick to Man) ಕೊಟ್ಟಿರುವ ಶಿಕ್ಷೆ ಈಗ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಕೈಗೆ ಬಳೆ, ತುಟಿಗೆ ಲಿಪ್​ಸ್ಟಿಕ್​!

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಜೊತೆ ವಿಡಿಯೋನಲ್ಲಿರುವ ಯುವಕ ಅಸಭ್ಯವಾಗಿ ವರ್ತಿಸಿದ್ದಾನೆ. ಅವನು ಮಾಡಿದನ್ನು ಸುಮ್ಮನೆ ಸಹಿಸಿಕೊಳ್ಳುವ ಬದಲು ಸಿಡಿದೆದ್ದಿರುವ ಈಕೆ, ಅತನನ್ನು ಎಳೆದು ಒಂದು ಸೀಟ್​ನಲ್ಲಿ ಕೂರಿಸಿ, ಅವನ ಮುಖಕ್ಕೆ ಮೇಕ್​​ಅಪ್​​ ಬಳಿಯಲು ಶುರುವಿಟ್ಟಿದ್ದಾಳೆ.
ಪ್ರಾರಂಭದಲ್ಲಿ ಆಕೆಯಿಂದ ತಪ್ಪಿಸಿಕೊಳ್ಳಲು ಯುವಕ ಯತ್ನಿಸುತ್ತಿದ್ದಂತೆ ಪಕ್ಕದಲ್ಲಿದ್ದ ಪ್ರಯಾಣಿಕರು ಅವನನ್ನು ಆತನ ಸೀಟ್​ನಲ್ಲಿ ಕುಳಿಸಿದ್ದಾರೆ. ನಂತರ ಅವನ ತುಟಿಗೆ ಲಿಪ್​ಸ್ಟಿಕ್​ ಮತ್ತು ಕೈಗೆ ಬಳೆಯನ್ನು ತೊಡಿಸಿದ ಯುವತಿ, ಆ ಯುವಕ ಇನ್ನೊಮ್ಮೆ ಯಾವುದೇ ಹೆಣ್ಣಿನೊಂದಿಗೆ ಅಸಭ್ಯವಾಗಿ ವರ್ತಿಸದಂತೆ ತಕ್ಕ ಪಾಠ ಕಲಿಸಿದ್ದಾಳೆ.
ಈ ಯುವತಿ ಹೀಗೆ ಆತನ ಮುಖಕೆ ಮೇಕ್​ಅಪ್​ ಮಾಡುತ್ತಿದ್ದರೆ, ಸಹ ಪ್ರಯಾಣಿಕರು ಯುವತಿ ಮಾಡುತ್ತಿರುವ ಕೃತ್ಯಕ್ಕೆ ಬೆಂಬಲ ಸೂಚಿಸಿ, ಚಪ್ಪಾಳೆ ತಟ್ಟುವ ಹಾಗೂ ಘೋಷಣೆ ಕೂಗುವ ಮೂಲಕ ಹುರಿದಂಬಿಸಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್​ ಸೆಕ್ಷನ್​ ತುಂಬಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಅಕ್ಕ.. ನೀನು ಸರಿಯಾದ ಕೆಲಸ ಮಾಡಿದ್ದಿಯಾ. ಇನ್ಮುಂದೆ ಅವನು ಯಾವ ಹುಡುಗಿ ತಂಟೆಗೂ ಹೋಗಲ್ಲ ಎಂದು ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ಹೇಳಿದ್ದಾರೆ.
ಪ್ರತಿಯೊಬ್ಬ ಹೆಣ್ಣು ಇಕೆಯಂತೆ ಧೈರ್ಯವಂತೆಯಾದರೆ, ಹೆಣ್ಣಿಗೆ ಸಮಾಜದಲ್ಲಿ ಯಾರಿಂದಲೂ ಭಯ ಎನ್ನುವುದು ಇರುವುದಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ಯುವತಿಗೆ ಕೆಲಸಕ್ಕೆ ನಾವೊಂದು ಸಲಾಂ ಹೇಳಲೇಬೇಕು, ಇಂದು ನಿಮ್ಮನ್ನು ನೋಡಿ ನಾಲ್ಕು ಹೆಣ್ಣು ಮಕ್ಕಳು ನಾನು ಯಾವುದಕ್ಕೂ ಅಂಜುವ ಅಗತ್ಯವಿಲ್ಲ ಎಂದು ಭಾವಿಸಿದರೆ ಸಾಕು ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net