ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಯಾನಿವ್ ರೆವಾಚ್, ಭಾರತೀಯರಿಗೆ ಛತ್ರಪತಿ ಶಿವಾಜಿ ಮಹಾರಾಜರ ಪ್ರಭಾವ ಎಷ್ಟಿದೆ ಮತ್ತು ಅವರು ಎಷ್ಟು ಮುಖ್ಯ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಭಾರತದಲ್ಲಿ ತಯಾರಾಗಲಿರುವ ಮಹಾರಾಜರ ಬೃಹತ್ ಪ್ರತಿಮೆಯನ್ನು ಇಸ್ರೇಲ್‌ಗೆ ಕೊಂಡೊಯ್ದು ಅಲ್ಲಿನ ಪ್ರಮುಖ ನಗರವೊಂದರಲ್ಲಿ ಸ್ಥಾಪಿಸುವುದು ನಮ್ಮ ಆಲೋಚನೆಯಾಗಿದೆ. ಇದು ಕೇವಲ ಒಂದು ಸಾಮಾನ್ಯ ಯೋಜನೆಯಲ್ಲ, ಬದಲಿಗೆ ದೀರ್ಘಕಾಲದವರೆಗೆ ಭಾರತ ಮತ್ತು ಇಸ್ರೇಲ್ ಜನರನ್ನು ಭಾವನಾತ್ಮಕವಾಗಿ ಬೆಸೆಯುವ ಮಹತ್ವದ ಕೊಂಡಿಯಾಗಲಿದೆ ಎಂದು ತಿಳಿಸಿದ್ದಾರೆ.