ಭಾರತೀಯ ಕ್ರಿಕೆಟ್ ಆಟಗಾರ ಸಚಿನ್ ಅವರು ಹಳ್ಳಿಯೊಂದರಲ್ಲಿ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಹುಡುಗರ ಗುಂಪೊಂದು ವಾಹನದಲ್ಲಿ ಆಟವಾಡುತ್ತಿದ್ದರು. ಇದು ದುಬಾರಿ ಕಾರಲ್ಲ, ಆಟಿಕೆಯಲ್ಲ ಆದರೆ, ಮಕ್ಕಳು ತಾವಾಗಿಯೇ ತಯಾರಿಸಿ ಆಡುತ್ತಿದ್ದ ವಾಹನವಾಗಿತ್ತು. ಇದನ್ನು ಕಂಡ ಸಚಿನ್ ಅವರು ಗ್ರಾಮೀಣ ಭಾಗದ ಯುವಕರ ಪ್ರತಿಭೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ವಿಡಿಯೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.