ರಷ್ಯಾದ 11 ವಲಯಗಳಲ್ಲೂ ಇಂಧನ ಕೊರತೆಯ ಪರಿಣಾಮ ಕಂಡುಬರುತ್ತಿದ್ದು, ಹಲವು ಪ್ರದೇಶಗಳಲ್ಲಿ ಪೆಟ್ರೋಲ್ ಪೂರೈಕೆಗೆ ಮಿತಿಗೊಳಿಸುವ ಕ್ರಮ, ಪೆಟ್ರೋಲ್ ಬಂಕ್‌ಗಳಲ್ಲಿ ಉದ್ದ ಸಾಲುಗಳು ಹಾಗೂ ಪೆಟ್ರೋಲ್ ದರದಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಇತರ ದೇಶಗಳಿಂದ ಇಂಧನ ಆಮದು ಕುರಿತು ರಷ್ಯಾ ಮಾತುಕತೆ ನಡೆಸುತ್ತಿದೆ ಎಂದು ಕ್ರೆಮ್ಲಿನ್ ತಿಳಿಸಿದೆ.