ಮೂರನೆಯದಾಗಿ, ಸಮಭಾಜಕ ವೃತ್ತದ ಸುತ್ತ ಚಲಿಸುತ್ತಾ ಮಳೆ ತರುವ ಮೋಡ ಹಾಗೂ ವಿಂಡ್ ವ್ಯವಸ್ಥೆಯಾದ 'ಮ್ಯಾಡೆನ್-ಜುಲಿಯನ್ ಆಸಿಲೇಷನ್' ಪೂರಕವಾಗಿಲ್ಲದಿರುವುದು ಮತ್ತು ನಾಲ್ಕನೆಯದಾಗಿ, ಹಿಂದೂ ಮಹಾಸಾಗರದ ತಾಪಮಾನದ ವ್ಯತ್ಯಾಸವನ್ನು ಸೂಚಿಸುವ 'ಇಂಡಿಯನ್ ಓಷನ್ ಡೈಪೋಲ್' ತಟಸ್ಥ ಸ್ಥಿತಿಯಲ್ಲಿರುವುದು. ಸಾಮಾನ್ಯವಾಗಿ ಈ ಇಂಡಿಯನ್ ಓಷನ್ ಡೈಪೋಲ್ ಧನಾತ್ಮಕವಾಗಿದ್ದಾಗ, ಪಶ್ಚಿಮ ಹಿಂದೂ ಮಹಾಸಾಗರವು ಹೆಚ್ಚು ಬೆಚ್ಚಗಾಗಿ ಮುಂಗಾರು ಮೋಡಗಳಿಗೆ ಭಾರಿ ಪ್ರಮಾಣದ ಮಳೆಯನ್ನು ಒದಗಿಸುತ್ತದೆ, ಆದರೆ ಈ ಬಾರಿ ಅದು ತಟಸ್ಥವಾಗಿದ್ದರಿಂದ ಜೂನ್ ತಿಂಗಳು ಮಳೆಯಿಲ್ಲದೆ ಒಣಗುವಂತಾಯಿತು ಎಂದು ಹವಾಮಾನ ಇಲಾಖೆ ವಿವರಿಸಿದೆ, (ಏಜೆನ್ಸೀಸ್).