ಇನ್‌ಸ್ಟಾಗ್ರಾಮ್ ಸ್ನೇಹಿತನೊಂದಿಗೆ ಓಡಿಹೋಗಿದ್ದ ಮಹಿಳೆ; ಮಕ್ಕಳ ಕಣ್ಣೀರು ನೋಡಿ ವಾಪಸ್ ಬಂದಿದ್ದೇ ರೋಚಕ! illicit affair

illicit affair (ಸಾಂದರ್ಭಿಕ ಚಿತ್ರ)
illicit affair (ಸಾಂದರ್ಭಿಕ ಚಿತ್ರ)
Published on
ಉತ್ತರ ಪ್ರದೇಶ: ಸೋಶಿಯಲ್​ ಮೀಡಿಯಾ ಪ್ರೇಮಪಾಶಕ್ಕೆ ಸಿಲುಕಿ ಪತಿ ಮತ್ತು ನಾಲ್ಕು ಮಕ್ಕಳನ್ನು ತೊರೆದು ಇನ್​ಸ್ಟಾಗ್ರಾಮ್ (illicit affair)​ ಸ್ನೇಹಿತನೊಂದಿಗೆ ಓಡಿಹೋಗಿದ್ದ 40 ವರ್ಷದ ಮಹಿಳೆಯೊಬ್ಬರು ಅಂತಿಮವಾಗಿ ತಮ್ಮ ಮಕ್ಕಳ ಭಾವನಾತ್ಮಕ ಮನವಿಗೆ ಸ್ಪಂದಿಸಿ ಮನೆಗೆ ಮರಳಿದ್ದಾರೆ ಎಂದು ಪೊಲೀಸರು ಭಾನುವಾರ (ಮಾ.29) ತಿಳಿಸಿದ್ದಾರೆ.

ಘಟನೆ ಏನು?

ನಾಲ್ಕು ಮಕ್ಕಳ ತಾಯಿಯಾಗಿರುವ ಮಹಿಳೆಯೊಬ್ಬರು ಕೆಲವು ತಿಂಗಳುಗಳ ಹಿಂದೆ ಇನ್​ಸ್ಟಾಗ್ರಾಮ್​ ಮೂಲಕ ವ್ಯಕ್ತಿಯೊಬ್ಬನನ್ನು ಪರಿಚಯಿಸಿಕೊಂಡಿದ್ದಳು. ಈ ಪರಿಚಯ ಬೆಳೆದು ಪ್ರೇಮಕ್ಕೆ ತಿರುಗಿತು. ಹಾಗಾಗಿ ಆತನೊಂದಿಗೆ ಜೀವನ ನಡೆಸುವ ಸಲುವಾಗಿ ಗಂಡ ಮತ್ತು ಮಕ್ಕಳನ್ನು ಬಿಟ್ಟು ಪ್ರಿಯತಮನೊಂದಿಗೆ ಓಡಿ ಹೋಗಿದ್ದರು.
ಮಹಿಳೆಯ ಹಠಾತ್ ಕಣ್ಮರೆಯಿಂದ ಗಾಬರಿಗೊಂಡ ಕುಟುಂಬವು ಆಕೆಯ ಹುಡುಕಾಟವನ್ನು ಪ್ರಾರಂಭಿಸಿ, ನಂತರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ, ಮಹಿಳೆ ತನ್ನ ಇನ್‌ಸ್ಟಾಗ್ರಾಮ್ ಸ್ನೇಹಿತನೊಂದಿಗೆ ಬೇರೆ ನಗರಕ್ಕೆ ತೆರಳಿರುವುದು ಪತ್ತೆಯಾಗಿತ್ತು.
ಶನಿವಾರ, ಮಹಿಳೆಯ ಪತಿ, ಮಕ್ಕಳು ಮತ್ತು ಇತರ ಸಂಬಂಧಿಕರು ಆಕೆ ಇರುವ ಸ್ಥಳಕ್ಕೆ ತಲುಪಿ ಮನೆಗೆ ಬರುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಆಕೆ ಎಲ್ಲಾ ಮನವಿಗಳನ್ನು ತಿರಸ್ಕರಿಸಿ ಗೆಳೆಯನೊಂದಿಗೆ ವಾಸಿಸುವುದಾಗಿ ತಿಳಿಸಿದ್ದಾಳೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಮಹಿಳೆ ಮತ್ತು ಆಕೆಯ ಪ್ರೇಯಸಿ ಹಾಗೂ ಕುಟುಂಬದ ಸದಸ್ಯರನ್ನು ಪೊಲೀಸ್ ಠಾಣೆಗೆ ಕರೆತಂದು ಠಾಣಾಧಿಕಾರಿ ಅರುಣ್ ಕುಮಾರ್ ಸಿಂಗ್ ಅವರ ಸಮ್ಮುಖದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘ ಸಂಧಾನ ಸಭೆ ನಡೆಸಿದರು.
ಚರ್ಚೆಯ ಸಮಯದಲ್ಲಿ, ಮಕ್ಕಳ ಭಾವನಾತ್ಮಕ ವಿನಂತಿಗಳು ಮತ್ತು ಕುಟುಂಬ ಸದಸ್ಯರ ಮನವೊಲಿಕೆಯಿಂದ ಅಂತಿಮವಾಗಿ ಮಹಿಳೆ ತನ್ನ ಕುಟುಂಬದೊಂದಿಗೆ ಮನೆಗೆ ಮರಳಲು ಒಪ್ಪಿಕೊಂಡರು.
ನಮ್ಮ ಉದ್ದೇಶ ಕೇವಲ ಕೇಸ್ ದಾಖಲಿಸುವುದಲ್ಲ, ಬದಲಾಗಿ ಒಂದು ಕುಟುಂಬವನ್ನು ಉಳಿಸುವುದಾಗಿತ್ತು. ಎರಡು ಗಂಟೆಗಳ ಸಮಾಲೋಚನೆಯ ನಂತರ ಮಹಿಳೆ ತನ್ನ ತಪ್ಪು ತಿದ್ದಿಕೊಂಡು ಮಕ್ಕಳೊಂದಿಗೆ ಹೋಗಲು ಸಮ್ಮತಿಸಿದರು ಎಂದು ಅಧಿಕಾರಿ ಅರುಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net