ಈ ಬಗ್ಗೆ ಕೇರಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, ಸಾಮಾನ್ಯವಾಗಿ ಮೊದಲ ಒಂದು ಅಥವಾ ಎರಡು ಚರಣಗಳನ್ನು ಎಲ್ಲರೂ ಹಾಡುತ್ತಾರೆ, ಆದರೆ ಪೂರ್ಣ ಆವೃತ್ತಿಯನ್ನು ಕಡ್ಡಾಯಗೊಳಿಸುವುದು ತಪ್ಪು ಎಂದಿದ್ದಾರೆ. ಇದಕ್ಕೆ ತೀವ್ರ ಕೌಂಟರ್ ನೀಡಿರುವ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯತೆ ಮತ್ತು ರಾಜಕೀಯವನ್ನು ಮುಸ್ಲಿಂ ಲೀಗ್ ಹಾಗೂ ಎಸ್‌ಡಿಪಿಐ ಮುಂತಾದ ಸಂಘಟನೆಗಳು ನಿಯಂತ್ರಿಸುತ್ತಿವೆ. ಇಂದು ರಾಷ್ಟ್ರೀಯ ಗೀತೆಯನ್ನು ವಿರೋಧಿಸುವವರು ನಾಳೆ ರಾಷ್ಟ್ರಗೀತೆಯನ್ನೂ ವಿರೋಧಿಸುತ್ತಾರೆ ಎಂದು ಚಾಟಿ ಬೀಸಿದ್ದಾರೆ.