ಈ ವಿಡಿಯೋ 'ಎಕ್ಸ್' (ಟ್ವಿಟರ್) ನಲ್ಲಿ ಹಂಚಿಕೆಯಾದ ಬೆನ್ನಲ್ಲೇ ಸಾವಿರಾರು ವ್ಯೂಸ್ ಮತ್ತು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು, "ಇವನು ಬಾಲ್ಯದ ಜೇಠಾಲಾಲ್ ಇದ್ದಂತೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, "ದೇವರು ಎಲ್ಲಿದ್ದಾನೆ ಎಂದು ಹುಡುಕುವ ಅವಶ್ಯಕತೆ ಇಲ್ಲ, ಈ ಮಗುವಿನಲ್ಲೇ ನಿಜವಾದ ದೇವನಿದ್ದಾನೆ" ಎಂದು ಬರೆದಿದ್ದಾರೆ. "ತಾನು ಕಣ್ಣು ಮುಚ್ಚಿಕೊಂಡರೆ ಸಾಕು, ಇಡೀ ಜಗತ್ತೇ ನನ್ನನ್ನು ನೋಡುತ್ತಿಲ್ಲ ಎಂದು ಈ ಮಗು ಅಂದುಕೊಂಡಿದೆ, ಎಷ್ಟು ಮುಗ್ಧತೆ!" ಎಂದು ಹಲವರು ನಗುತ್ತಿದ್ದಾರೆ.