ಶ್ರೀಮಂತರು ಮಕ್ಕಳನ್ನು ಮಾಡಿಕೊಂಡ್ರೆ ಶ್ರೀಮಂತಿಕೆ ಮುಂದುವರಿಯುತ್ತೆ: ಆದರೆ ಬಡವರು....; ಅಶ್ನೀರ್ ಪತ್ನಿ ಮಾಧುರಿ ಗ್ರೋವರ್ ಹೇಳಿಕೆಗೆ ವ್ಯಾಪಕ ವಿರೋಧ! Madhuri Grover Controversy
ಉದ್ಯಮಿ ಅಶ್ನೀರ್ ಗ್ರೋವರ್ ಪತ್ನಿ ಮಾಧುರಿ ಗ್ರೋವರ್ ಹೇಳಿಕೆಗೆ ವಿರೋಧ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಉದ್ಯಮಿ ಅಶ್ನೀರ್ ಗ್ರೋವರ್ ಪತ್ನಿ ಮಾಧುರಿ ಗ್ರೋವರ್ ಹೇಳಿಕೆಗೆ ವಿರೋಧ
ವೈಯಕ್ತಿಕ ಜೀವನದ ರಹಸ್ಯ ಬಿಚ್ಚಿಡುತ್ತಾ ಬಡವ-ಶ್ರೀಮಂತರ ಮಕ್ಕಳ ಬಗ್ಗೆ ಆಡಿದ ಮಾತು ವೈರಲ್
ಮುಂಬೈ: 'ದೋಗ್ಲಾಪನ್' ಎಂಬ ಒಂದು ಡೈಲಾಗ್ ಮೂಲಕ ದೇಶದಾದ್ಯಂತ ಖ್ಯಾತಿಗಳಿಸಿದ್ದ ಉದ್ಯಮಿ ಎಂದರೆ ಅದು ಅಶ್ನೀರ್ ಗ್ರೋವರ್. ಭಾರತ್ ಪೆ ಎಂಬ ಆನ್ಲೈನ್ ಹಣ ವರ್ಗಾವಣೆ ಮಾಡುವ ಅಪ್ಲಿಕೇಶನನ್ನು ನಿರ್ಮಿಸಿದ ಕೀರ್ತಿ ಈ ಅಶ್ನೀರ್ ಗ್ರೋವರ್ಗೆ ಸಲ್ಲುತ್ತದೆ. ನಂತರ ಈ ಅಶ್ನೀರ್ ಗ್ರೋವರ್ ಶಾರ್ಕ್ಟ್ಯಾಂಕ್ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದರು. ಅಲ್ಲಿ ಇವರ ನೇರಮಾತು, ಡೈಲಾಗ್ಗಳು ಸಖತ್ ವೈರಲ್ ಆಗಿದ್ದವು.
ಆದರೆ ಈ ಬಾರಿ ಅಶ್ನೀರ್ ಅದಲಿಗೆ ಅವರ ಪತ್ನಿ ಮಾಧುರಿ ಗ್ರೋವರ್ (Madhuri Grover Controversy) ನೀಡಿರುವ ಹೇಳಿಕೆ ಈಗ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಹೇಳಿಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಉದ್ಯಮಿ ಅಶ್ನೀರ್ ಗ್ರೋವರ್ ಪತ್ನಿ ಮಾಧುರಿ ಗ್ರೋವರ್ ಸದ್ಯ ಲಾಕ್ಅಪ್ 2 ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಇವರು ನೀಡಿರುವ ಹೇಳಿಕೆಯೇ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಸ್ಪರ್ಧೆಯಿಂದ ಎಲಿಮಿನೇಟ್ ಆಗದೇ ಇರಲು ತನ್ನ ವೈಯಕ್ತಿಕ ಜೀವನದ ಯಾವುದಾದರೂ ಒಂದು ರಹಸ್ಯವನ್ನು ಬಿಚ್ಚಿಡುವ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಮಾಧುರಿ, ನಾನು ಮತ್ತು ಅಶ್ನೀರ್ ಮೂರನೇ ಮಗುವನ್ನು ಮಾಡಿಕೊಳ್ಳುವ ಬಗ್ಗೆ ಯೋಚಿಸಿದ್ದೆವು, ಆದರೆ ಮನೆಯವರು ಇದಕ್ಕೆ ಒಪ್ಪದಿದ್ದಾಗ ನಾವು ಎರಡೇ ಮಕ್ಕಳಿಗೆ ನಿಲ್ಲಬೇಕಾಯಿತು ಎಂದು ಹೇಳಿದ್ದಾರೆ.
ವಿವಾದಕ್ಕೆ ಕಾರಣವಾದ ಹೇಳಿಕೆ ಯಾವುದು?
ತನ್ನ ವೈಯಕ್ತಿಕ ಜೀವನದ ಹೇಳಿಕೆಯೊಂದಿಗೆ ಬಾಯಿ ಮುಚ್ಚಿದ್ದರೆ ಏನು ವಿವಾದವಾಗುತ್ತಿರಲಿಲ್ಲ. ಮಾತನ್ನು ಮುಂದುವರಿಸಿದ ಮಾಧುರಿ, ಮೂರನೇ ಮಕ್ಕಳು ನಾವು ಸದಾ ಯೌವನದಲ್ಲಿದ್ದೆವೆ ಎಂಬುದನ್ನು ಖಾತರಿ ಪಡೆಸುತ್ತದೆ.
ಶಾರುಖ್ ಖಾನ್ ಸಹ ಮೂರು ಮಕ್ಕಳನ್ನು ಹೊಂದಿದ್ದಾರೆ. ಆದರೆ ಶ್ರೀಮಂತರು ಮಕ್ಕಳನ್ನು ಮಾಡಿಕೊಂಡರೆ ಶ್ರೀಮಂತಿಕೆ ಮುಂದುವರಿಯುತ್ತದೆ, ಆದರೆ ಬಡವರು ಮಕ್ಕಳನ್ನು ಮಾಡಿಕೊಂಡರೆ ಬಡತನ ಹೆಚ್ಚಾಗುತ್ತದೆ ಹೇಳಿದ್ದಾರೆ.
ಮಾಧುರಿ ನೀಡಿದ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಶ್ರೀಮಂತರಿಗೆ ಮಾತ್ರ ಮಕ್ಕಳಾಗಬೇಕು ಎನ್ನುವ ಇಕೆಯ ಮನಸ್ಥಿತಿ ತನ್ನಲ್ಲಿ ಅಪಾರ ಸಂಪತ್ತಿದೆ ಎಂಬ ಅಂಹಕಾರದಿಂದ ಬರುತ್ತಿದೆ ಎಂದು ಜನ ಜರಿಯುತ್ತಿದ್ದಾರೆ.
ಇವರು ಜನರನ್ನು ಬಡವ, ಶ್ರೀಮಂತ ಎಂದು ಅಳೆಯುತ್ತಿದ್ದಾಳೆ. ನಾಳೆಯಿಂದ ಅದೇ ಬಡಮನೆಯ ಕೆಲಸದಾಕೆ ನಿನ್ನ ಮನೆಗೆ ಕೆಲಸಕ್ಕೆ ಬರದಿದ್ದರೆ, ನೀನೆ ಕೆಲಸ ಮಾಡಬೇಕಾಗುತ್ತದೆ ಎಂದು ಇನ್ನು ಕೆಲವರು ಆಕ್ರೋಶ ಹೊರಹಾಕುತ್ತಿದ್ದಾರೆ, (ಏಜನ್ಸೀಸ್).