ಯುವಕರು ಮಾಡದಿದ್ದರೆ ಇನ್ನಾರು ಮಾಡುತ್ತಾರೆ?: ವೈರಲ್ ಪೈಲಟ್ ಪ್ರಪೋಸಲ್‌ ಬೆಂಬಲಕ್ಕೆ ನಿಂತ ಮಾಜಿ ಸೈನಿಕರು.. Captain Bharat Bhardwaj

Captain Bharat Bhardwaj (ಚಿತ್ರ X)
Captain Bharat Bhardwaj (ಚಿತ್ರ X)
Published on
Captain Bharat Bhardwaj: ಭಾರತೀಯ ಸೇನಾ ವಿಮಾನಯಾನ ವಿಭಾಗದ ಯುವ ಪೈಲಟ್ ಕ್ಯಾಪ್ಟನ್ ಭರತ್ ಭಾರದ್ವಾಜ್ ಅವರು ಮಿಲಿಟರಿ ಹೆಲಿಕಾಪ್ಟರ್ ಮುಂದೆ ತಮ್ಮ ಗೆಳತಿಗೆ  ಪ್ರಪೋಸ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆದ ನಂತರ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಮಿಲಿಟರಿ ಶಿಷ್ಟಾಚಾರ, ಮತ್ತು "ವೈಯಕ್ತಿಕ ಕೃತ್ಯದ ಸೂಕ್ತತೆ"ಯನ್ನು ಅನೇಕರು ಪ್ರಶ್ನಿಸಿದ್ದಾರೆ.
ಈ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಒಳಗಾಗುತ್ತಿರುವ ಬೆನ್ನಲ್ಲೇ, ಈ ವಿವಾದ ಈಗ ಮತ್ತೊಂದು ಆಸಕ್ತಿದಾಯಕ ತಿರುವು ಪಡೆದುಕೊಂಡಿದೆ. ಹೆಚ್ಚುತ್ತಿರುವ ಟೀಕೆಗಳ ನಡುವೆಯೂ, ಹಲವಾರು ನಿವೃತ್ತ ಹಿರಿಯ ಸೇನಾ ಅಧಿಕಾರಿಗಳು ಮತ್ತು ಮಾಜಿ ಸೈನಿಕರು ಯುವ ಅಧಿಕಾರಿಯ ಬೆಂಬಲಕ್ಕೆ ಧಾವಿಸಿದ್ದಾರೆ.

ಯುವಕರು ಮಾಡದಿದ್ದರೆ ಇನ್ನಾರು ಮಾಡುತ್ತಾರೆ?

ನೀವು ಯುವ ಅಧಿಕಾರಿ ರಾಷ್ಟ್ರದ ಪ್ರೀತಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಬೇಕೆಂದು ಬಯಸುತ್ತೀರಿ, ಆದರೆ ಅವನು ತನ್ನ ನಿಶ್ಚಿತಾರ್ಥದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಬೇಕೆಂದು ನೀವು ಬಯಸುವುದಿಲ್ಲ. ನಾವು ಸೇನೆಯಲ್ಲಿ ಯುವಕರು ಮಾಡದಿದ್ದರೆ ಇನ್ನಾರು ಮಾಡುತ್ತಾರೆ ಎಂದು ಹೇಳುತ್ತೇವೆ ಎಂದು ಲೆಫ್ಟಿನೆಂಟ್​ ಜನರಲ್​ ಕೆಜೆಎಸ್​ ಧಿಲ್ಲೋನ್​ ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಭದ್ರತಾ ಲೋಪದ ಬಗ್ಗೆ ಮೌನ ಮುರಿದ ಧಿಲ್ಲೋನ್​!

ದೇಶಾದ್ಯಂತ ನಡೆದ ಅನೇಕ ನಿಮ್ಮ ಸೇನೆಯನ್ನು ತಿಳಿದುಕೊಳ್ಳಿ ಪ್ರದರ್ಶನಗಳಲ್ಲಿ ಮಿಲಿಟರಿ ಉಪಕರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ. ಅಲ್ಲಿ ವಿದ್ಯಾರ್ಥಿಗಳು, ಯುವಕರು ಮತ್ತು ಮಿಲಿಟರಿಯೇತರ ನಾಗರಿಕ ಸಿಬ್ಬಂದಿ ಮುಕ್ತವಾಗಿ ಬಂದು ಹೆಲಿಕಾಪ್ಟರ್, ಟ್ಯಾಂಕ್ ಹಾಗೂ ಯುದ್ಧೋಪಕರಣಗಳೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸೈನ್ಯದ ಬಗ್ಗೆ ತಮ್ಮ ಹೆಮ್ಮೆ ಮತ್ತು ಪ್ರೀತಿಯನ್ನು ತೋರಿಸಿದ್ದಾರೆ. ಆದ್ದರಿಂದ, ದಯವಿಟ್ಟು ಈ ಯುವ ಅಧಿಕಾರಿಯ ವೈಯಕ್ತಿಕ ಪ್ರೀತಿಯ ವಿಷಯದಲ್ಲಿ ರಾಷ್ಟ್ರೀಯ ಭದ್ರತಾ ದೃಷ್ಟಿಕೋನವನ್ನು ತರಬೇಡಿ. ಆದಾಗ್ಯೂ, ಈ ಯುವ ಸೈನಿಕನು ತನ್ನ ರಾಷ್ಟ್ರೀಯ ಕರ್ತವ್ಯವನ್ನು ಹೆಮ್ಮೆ ಮತ್ತು ಗೌರವದಿಂದ ಮಾಡಲಿ" ಎಂದು ಧಿಲ್ಲೋನ್ ತಿಳಿಸಿದ್ದಾರೆ.
ಆದಾಗ್ಯೂ, ಸುದ್ದಿ ಮೂಲಗಳೊಂದಿಗೆ ಮಾತನಾಡಿದ ಧಿಲ್ಲೋನ್​, ದೇಶಭಕ್ತಿ ಮತ್ತು ವೈಯಕ್ತಿಕ ಪ್ರೀತಿ ಪರಸ್ಪರ ಪ್ರತ್ಯೇಕವಾಗಿಲ್ಲ. ಅವರು ಸಾಮಾಜಿಕ ಮಾಧ್ಯಮ ಮತ್ತು ಇನ್ನಾವುದರ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿದರೆ, ಅದು ಶಿಸ್ತನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ ಅದು ಯುವ ಚೈತನ್ಯವನ್ನು ತೋರಿಸುತ್ತದೆ ಎಂದು ಹೇಳಿದರು.

ಯಾವುದೇ ಭದ್ರತಾ ಉಲ್ಲಂಘನೆ ಇಲ್ಲ!

ಕ್ಯಾಪ್ಟನ್ ಭರತ್ ಭಾರದ್ವಾಜ್ ಅವರ ವೈರಲ್ ವೀಡಿಯೊದ ಸುತ್ತಲಿನ ವಿವಾದಕ್ಕೆ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ (ನಿವೃತ್ತ) ಟೀಕಿಸಿದ್ದು, ಯುವ ಕ್ಯಾಪ್ಟನ್ ಹೆಲಿಕಾಪ್ಟರ್ ಮುಂದೆ ಪ್ರಪೋಸ್ ಮಾಡುತ್ತಿರುವ ಈ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವಿಷಕಾರಿಯಾಗಿದೆ. ಹಲವು ಸಂದರ್ಭಗಳಲ್ಲಿ ಸೇನಾ ಉಪಕರಣಗಳು ಸಾರ್ವಜನಿಕ ವೀಕ್ಷಣೆ ಮತ್ತು ಛಾಯಾಗ್ರಹಣಕ್ಕೆ ಮುಕ್ತವಾಗಿರುತ್ತವೆ. ಆದರಿಂದ ಯಾವುದೇ ಭದ್ರತಾ ಉಲ್ಲಂಘನೆಯಾಗಿಲ್ಲ ಎಂದು ಹೇಳಿದ್ದಾರೆ.

ಘಟನೆ ಹಿನ್ನಲೆ

ವೈರಲ್ ಆಗಿರುವ ವಿಡಿಯೋದಲ್ಲಿ, ಕ್ಯಾಪ್ಟನ್ ಭರತ್ ಭಾರದ್ವಾಜ್ ಅವರು ತಮ್ಮ ಸೇನಾ ಸಮವಸ್ತ್ರದಲ್ಲೇ ಕರ್ತವ್ಯದ ಸ್ಥಳದಲ್ಲಿದ್ದ ಮಿಲಿಟರಿ ಹೆಲಿಕಾಪ್ಟರ್ ಮುಂದೆ ನಿಂತು ತಮ್ಮ ಗೆಳತಿಗೆ ಮಂಡಿಯೂರಿ ಪ್ರಪೋಸ್​ ಮಾಡಿದ್ದಾರೆ. ಈ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net