ಶುದ್ಧ ಗಾಳಿ ನೀಡಲು ಸಾಧ್ಯವಾಗದಿದ್ದರೆ, ಗಾಳಿ ಶುದ್ಧೀಕರಣ ಯಂತ್ರಗಳ ಮೇಲಿನ ದರ ಕಡಿತಗೊಳಿಸಿ: ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಸೂಚನೆ | Air Purifier

 Air Purifier
Air Purifier
Published on
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ವಾಯು ಮಾಲಿನ್ಯ ಬಿಕ್ಕಟ್ಟಿನ ಬಗ್ಗೆ ಬುಧವಾರ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ನಗರವು 'ತುಂಬಾ ಕಳಪೆಯಾದ ಗಾಳಿಯ ಗುಣಮಟ್ಟವನ್ನು ದಾಖಲಿಸುತ್ತಿರುವುದರಿಂದ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಸಭೆಯನ್ನು ಕರೆದು, ಗಾಳಿ ಶುದ್ಧೀಕರಣ ಯಂತ್ರಗಳ (Air Purifier) ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸಲು ಅಥವಾ ರದ್ದುಗೊಳಿಸುವಂತೆ ನಿರ್ಧರಿಸಲು ನಿರ್ದೇಶಿಸಿದೆ.
ದೆಹಲಿಯಲ್ಲಿ ಗಾಳಿ 'ತುಂಬಾ ಕಳಪೆ'ಯಾಗಿರುವ ಈ "ತುರ್ತು ಪರಿಸ್ಥಿತಿಯಲ್ಲಿ" ವಾಯು ಶುದ್ಧೀಕರಣ ಯಂತ್ರಗಳ ಮೇಲಿನ ತೆರಿಗೆಯಿಂದ ವಿನಾಯಿತಿ ನೀಡಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ಪೀಠವು ಅಸಮಾಧಾನ ವ್ಯಕ್ತಪಡಿಸಿದೆ. ನಾಗರಿಕರು ಉಸಿರಾಡಲು ಶುದ್ಧ ಗಾಳಿಯನ್ನು ಒದಗಿಸಲು ಅಧಿಕಾರಿಗಳಿಗೆ ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಗಾಳಿ ಶುದ್ಧೀಕರಣ ಯಂತ್ರಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡುವುದು ಮಾತ್ರ ಸಾಧ್ಯ ಎಂದು ಪೀಠ ಹೇಳಿದೆ, ಇವುಗಳಿಗೆ ಪ್ರಸ್ತುತ 18% ತೆರಿಗೆ ವಿಧಿಸಲಾಗುತ್ತಿದೆ.
“ನೀವು ಮಾಡಬಹುದಾದ ಕನಿಷ್ಠ ಕೆಲಸ ಇದು. ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಗಾಳಿ ಬೇಕು. ನಿಮಗೆ ಅದನ್ನು ಮಾಡಲು ಸಾಧ್ಯವಾಗದಿದ್ದರೆ, ನೀವು ಮಾಡಬಹುದಾದ ಕನಿಷ್ಠ ಜಿಎಸ್‌ಟಿಯನ್ನು ಕಡಿಮೆ ಮಾಡುವುದು. ತಾತ್ಕಾಲಿಕವಾಗಿ 15 ದಿನಗಳವರೆಗೆ ವಿನಾಯಿತಿ ನೀಡಿ. ಈ ಪರಿಸ್ಥಿತಿಯನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ.
ವಾಯು ಶುದ್ಧೀಕರಣ ಯಂತ್ರಗಳನ್ನು "ವೈದ್ಯಕೀಯ ಸಾಧನಗಳು" ಎಂದು ವರ್ಗೀಕರಿಸಲು ಮತ್ತು GST ಯನ್ನು 5% ಸ್ಲ್ಯಾಬ್‌ಗೆ ಇಳಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL)ಯನ್ನು ಹೈಕೋರ್ಟ್ ವಿಚಾರಣೆ ನಡೆಸಿ ಈ ತೀರ್ಪನ್ನು ನೀಡಿದೆ.
ದೆಹಲಿಯಲ್ಲಿ ತೀವ್ರ ವಾಯು ಮಾಲಿನ್ಯದಿಂದ ಉಂಟಾದ "ತೀವ್ರ ತುರ್ತು ಬಿಕ್ಕಟ್ಟು" ಯನ್ನು ಗಮನದಲ್ಲಿಟ್ಟುಕೊಂಡು ಶುದ್ಧೀಕರಣ ಯಂತ್ರಗಳನ್ನು ಐಷಾರಾಮಿ ವಸ್ತುಗಳೆಂದು ಪರಿಗಣಿಸಲಾಗುವುದಿಲ್ಲ ಎಂದು ವಕೀಲ ಕಪಿಲ್ ಮದನ್ ಅವರ ಅರ್ಜಿಯಲ್ಲಿ ತಿಳಿಸಲಾಗಿತ್ತು. ಶುದ್ಧ ಒಳಾಂಗಣ ಗಾಳಿಯನ್ನು ಪಡೆಯಲು ಆರೋಗ್ಯ ಮತ್ತು ಬದುಕುಳಿಯುವಿಕೆಗೆ ಇದು ಅನಿವಾರ್ಯವಾಗಿದೆ ಎಂದು ಅವರು ವಾದ ಮಂಡಿಸಿದರು.
ಡಿಸೆಂಬರ್ 26 ಕ್ಕೆ GST ಮಂಡಳಿ ಯಾವಾಗ ಸಭೆ ಸೇರಲಿದೆ ಎಂಬುದನ್ನು ಅಧಿಕಾರಿಗಳ ವಕೀಲರು ನ್ಯಾಯಾಲಯಕ್ಕೆ ತಿಳಿಸಲು ನ್ಯಾಯಪೀಠ ಸೂಚಿಸಿದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net