ಇತ್ತೀಚೆಗೆ, ಕೇಂದ್ರ ಸರ್ಕಾರ E100 ಇಂಧನದ ಕಾನೂನು ಅನುಮೋದನೆಯ ಬೆನ್ನಲ್ಲೇ ಎಥೆನಾಲ್ ಮಿಶ್ರಣದ ಕುರಿತು ಹಲವಾರು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಶುರುಮಾಡಿವೆ. ಈ ಮಧ್ಯೆ, ಇರುವೆಗಳು ಕಬ್ಬಿನಾಂಶದಿಂದ ತಯಾರಾದ ಈ20 ಪೆಟ್ರೋಲ್ ವಾಸನೆಗೆ ಹುಡುಕಿ ಬರುತ್ತಿವೆ ಎಂಬ ವಿಡಿಯೋ ವೈರಲ್ ಆಯಿತು. ಇದನ್ನು ತಳ್ಳಿಹಾಕಿದ ಬಿಪಿಸಿಎಲ್, ಪೆಟ್ರೋಲ್‌ನೊಂದಿಗೆ ಬೆರೆಸುವ ಇಂಧನ ದರ್ಜೆಯ ಎಥೆನಾಲ್ ಅನ್ನು ವಿಶೇಷ ಪ್ರಕ್ರಿಯೆಯ ಮೂಲಕ ತಯಾರಿಸಲಾಗುತ್ತದೆ. ಹೀಗಾಗಿ, ಅಂತಿಮ ಇಂಧನದಲ್ಲಿ ಯಾವುದೇ ಸಕ್ಕರೆ ಶೇಷ ಉಳಿಯುವುದಿಲ್ಲ ಎಂದಿದೆ.