ಫೆಬ್ರವರಿ 15ರ ಪಂದ್ಯವನ್ನು ಆಡದಿರಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ನಿರ್ಧಾರವನ್ನು ಇನ್ನೂ ಐಸಿಸಿಗೆ ತಿಳಿಸಿಲ್ಲ ಎನ್ನಲಾಗಿದೆ. ಇನ್ನೂ ಪಾಕ್ ತಂಡ ನಾಳೆ ಕೋಲಂಬೊಗೆ ಪ್ರಯಾಣ ಬೆಳಸಲಿದ್ದು, ಫೆ. 4ರಂದು ಕೊಲಂಬೊದಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಏಕೈಕ ಅಭ್ಯಾಸ ಪಂದ್ಯವನ್ನು ಆಡಲಿದೆ. ಫೆ. 07ರಂದು ನೆದರ್ಲ್ಯಾಂಡ್ಸ್ ವಿರುದ್ಧ ಪಂದ್ಯ ಆರಂಭಿಸಲಿದೆ. ಫೆ. 10ರಂದು ಅಮೆರಿಕಾ, ಫೆ. 18ರಂದು ನಮೀಬಿಯಾ ವಿರುದ್ಧ ಆಡಲಿದೆ. ಭಾರತದ ವಿರುದ್ಧ ಪಂದ್ಯಗಳನ್ನು ಬಹಿಷ್ಕರಿಸಿದ್ರೆ ಪಾಕಿಸ್ತಾನ 2 ಅಂಕ ಕಳೆದುಕೊಳ್ಳಲಿದೆ (ಏಜೆನ್ಸೀಸ್).