ಐಸಿಸಿ ಟಿ20 ಶ್ರೇಯಾಂಕ: ಕಿಶನ್ ಮಿಂಚಿನ ಜಿಗಿತ; ಟಾಪ್ 10 ಪಟ್ಟಿಯಲ್ಲಿ ನಾಲ್ವರು ಭಾರತೀಯರು..! ICC T20 Rankings

ಐಸಿಸಿ ಟಿ20 ಶ್ರೇಯಾಂಕ: ಕಿಶನ್ ಮಿಂಚಿನ ಜಿಗಿತ; ಟಾಪ್ 10 ಪಟ್ಟಿಯಲ್ಲಿ ನಾಲ್ವರು ಭಾರತೀಯರು..!
ಐಸಿಸಿ ಟಿ20 ಶ್ರೇಯಾಂಕ: ಕಿಶನ್ ಮಿಂಚಿನ ಜಿಗಿತ; ಟಾಪ್ 10 ಪಟ್ಟಿಯಲ್ಲಿ ನಾಲ್ವರು ಭಾರತೀಯರು..!
Published on
ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ಭಾರತದ ಆರಂಭಿಕ ಆಟಗಾರ ಇಶಾನ್ ಕಿಶನ್, ಐಸಿಸಿ ಬಿಡುಗಡೆ ಮಾಡಿರುವ ನೂತನ ಟಿ20 ಬ್ಯಾಟಿಂಗ್(ICC T20 Rankings) ಶ್ರೇಯಾಂಕದಲ್ಲಿ ಭಾರೀ ಏರಿಕೆ ಕಂಡಿದ್ದಾರೆ. ಪಾಕಿಸ್ತಾನ ವಿರುದ್ಧ ಕೇವಲ 40 ಎಸೆತಗಳಲ್ಲಿ 77 ರನ್ ಚಚ್ಚಿದ ಕಿಶನ್, ಈಗ ವಿಶ್ವದ ಎಂಟನೇ ಶ್ರೇಯಾಂಕದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.

ಟಾಪ್ 10 ನಲ್ಲಿ ಭಾರತದ ಅಬ್ಬರ

ನೂತನ ಶ್ರೇಯಾಂಕದ ಅನ್ವಯ, ಟಾಪ್ 10 ಪಟ್ಟಿಯಲ್ಲಿ ಈಗ ನಾಲ್ವರು ಭಾರತೀಯ ಬ್ಯಾಟರ್‌ಗಳಿದ್ದಾರೆ. ಕಿಶನ್ ಅವರು ನ್ಯೂಜಿಲೆಂಡ್‌ನ ಟಿಮ್ ಸೀಫರ್ಟ್ ಮತ್ತು ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅವರನ್ನು ಹಿಂದಿಕ್ಕಿ 8ನೇ ಸ್ಥಾನಕ್ಕೇರಿದ್ದಾರೆ.
ಅಭಿಷೇಕ್ ಶರ್ಮಾ: ವಿಶ್ವಕಪ್‌ನಲ್ಲಿ ಸತತ ಶೂನ್ಯ ಸುತ್ತಿದ್ದರೂ, ಹಿಂದಿನ ಭರ್ಜರಿ ಫಾರ್ಮ್‌ನ ಆಧಾರದ ಮೇಲೆ 891 ರೇಟಿಂಗ್‌ ಅಂಕಗಳೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.
ತಿಲಕ್ ವರ್ಮಾ: 4ನೇ ಸ್ಥಾನದಲ್ಲಿದ್ದು ಸ್ಥಿರತೆ ಕಾಯ್ದುಕೊಂಡಿದ್ದಾರೆ.
ಸೂರ್ಯಕುಮಾರ್ ಯಾದವ್: 6ನೇ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ.

ಆಲ್‌ರೌಂಡರ್ ಮತ್ತು ಬೌಲಿಂಗ್ ವಿಭಾಗ

ಸೈಮ್ ಅಯೂಬ್ ನಂ.1: ಪಾಕಿಸ್ತಾನದ ಸೈಮ್ ಅಯೂಬ್ ಜಿಂಬಾಬ್ವೆಯ ಸಿಕಂದರ್ ರಾಜಾ ಅವರನ್ನು ಹಿಂದಿಕ್ಕಿ ಆಲ್‌ರೌಂಡರ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಭಾರತದ ಹಾರ್ದಿಕ್ ಪಾಂಡ್ಯ 3ನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ.
ವರುಣ್ ಚಕ್ರವರ್ತಿ ದರ್ಬರ್​: ಬೌಲಿಂಗ್ ವಿಭಾಗದಲ್ಲಿ ಭಾರತದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ನಂ.1 ಪಟ್ಟವನ್ನು ಭದ್ರಪಡಿಸಿಕೊಂಡಿದ್ದಾರೆ. ಅಕ್ಷರ್ ಪಟೇಲ್ (14), ಜಸ್ಪ್ರೀತ್ ಬುಮ್ರಾ (15) ಮತ್ತು ಅರ್ಶ್‌ದೀಪ್ ಸಿಂಗ್ (16) ಮುಂದಿನ ದಿನಗಳಲ್ಲಿ ಶ್ರೇಯಾಂಕ ಸುಧಾರಿಸಿಕೊಳ್ಳುವ ಹಾದಿಯಲ್ಲಿದ್ದಾರೆ.

ಇತರ ಪ್ರಮುಖ ಬದಲಾವಣೆಗಳು

ಆಸ್ಟ್ರೇಲಿಯಾವನ್ನು ವಿಶ್ವಕಪ್‌ನಿಂದ ಹೊರಹಾಕಲು ಕಾರಣವಾದ ಭರ್ಜರಿ ಶತಕ ಸಿಡಿಸಿದ ಶ್ರೀಲಂಕಾದ ಪತುಮ್ ನಿಸ್ಸಾಂಕ ಈಗ ಬ್ಯಾಟಿಂಗ್ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಜಿಂಬಾಬ್ವೆಯ ಬ್ರಾಡ್ ಇವಾನ್ಸ್ ಬೌಲಿಂಗ್ ಪಟ್ಟಿಯಲ್ಲಿ 10 ಸ್ಥಾನಗಳ ಜಿಗಿತ ಕಂಡು 5ನೇ ಸ್ಥಾನಕ್ಕೇರಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net