ವಿವಿಧ ರಾಜಕೀಯ ಪಕ್ಷಗಳ ಸುಮಾರು 65 ಸಂಸದರು ವಾಂಗ್ಚುಕ್ ಅವರಿಗೆ ಪತ್ರ ಬರೆದು, ದೇಶಕ್ಕೆ ನಿಮ್ಮ ಅಗತ್ಯವಿದೆ, ದಯವಿಟ್ಟು ಉಪವಾಸ ಸತ್ಯಾಗ್ರಹ ಕೈಬಿಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಂಗ್ಚುಕ್, ನನಗೂ ನನ್ನ ವಿದ್ಯಾರ್ಥಿಗಳ ಬಳಿಗೆ ಹಿಂತಿರುಗಿ ಮತ್ತೆ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುವ ಆಸೆಯಿದೆ. ಆದರೆ, ಈ ಹೋರಾಟವನ್ನು ನಂಬಿ ಬೀದಿಗಿಳಿದ ಯುವಜನರ ಬಲಿ ಕೊಟ್ಟು ನಾನು ವಾಪಸ್ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.