'ನಾನು ಮುಸ್ಲಿಂ ಎಂಬ ಕಾರಣಕ್ಕೆ ಮನೆ ನೀಡಲಿಲ್ಲ': ಲಖನೌ ಮಹಿಳೆಯ ವಿಡಿಯೋ ವೈರಲ್; ಇಂಟರ್ನೆಟ್‌ನಲ್ಲಿ ಭಾರಿ ಆಕ್ರೋಶ! Muslim

ಬುಷ್ರಾ ರಜಾ ಅಲಿ ಖಾನ್
ಬುಷ್ರಾ ರಜಾ ಅಲಿ ಖಾನ್
Published on

ಪ್ರಮುಖ ಮುಖ್ಯಾಂಶಗಳು

  • ಮುಸ್ಲಿಂ ಎಂಬ ಕಾರಣಕ್ಕೆ ಮಹಿಳೆಗೆ ಬಾಡಿಗೆ ನಿರಾಕರಣೆ
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋ
  • ಮಹಿಳೆಯ ಪರ-ವಿರೋಧ ಬ್ಯಾಟ್​ ಬೀಸಿದ ನೆಟ್ಟಿಗರು
ಉತ್ತರಪ್ರದೇಶ: ಲಖನೌ ನಿವಾಸಿ ಬುಷ್ರಾ ರಜಾ ಅಲಿ ಖಾನ್ ಎಂಬ ಮಹಿಳೆ, ತಾನು ಮುಸ್ಲಿಂ​ (Muslim) ಎಂಬ ಕಾರಣಕ್ಕಾಗಿ ತನಗೆ ಫ್ಲಾಟ್ ನಿರಾಕರಿಸಲಾಗಿದೆ ಎಂದು ಹೇಳಿಕೊಂಡ ವಿಡಿಯೋ ವೈರಲ್​ ಆಗುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ಪ್ರಕಾರ, ಮನೆ ಮಾಲೀಕರು ಆರಂಭದಲ್ಲಿ ಅಪಾರ್ಟ್ಮೆಂಟ್​ನ್ನು ಬಾಡಿಗೆಗೆ ನೀಡಲು ಒಪ್ಪಿಕೊಂಡರು. ಆದರೆ ನಂತರ ನಾನು ಮುಸ್ಲಿಂ​ ತಿಳಿದ ನಂತರ ಅಸ್ಪಷ್ಟ ಕಾರಣಗಳನ್ನು ನೀಡಿ ಬಾಡಿಗೆ ಕೊಡುವುದಿಲ್ಲ ಎಂದು ಹೇಳಿದರು ಎಂದು ಬುಷ್ರಾ ಅಲಿ ವಿಡಿಯೋನಲ್ಲಿ ಹೇಳಿದ್ದಾರೆ.
ಈ ಕ್ಲಿಪ್ ವೈರಲ್ ಆದ ನಂತರ, ಅನೇಕ ಇಂಟರ್ನೆಟ್ ಬಳಕೆದಾರರು ಬುಷ್ರಾ ಅಲಿ ಬೆಂಬಲಕ್ಕೆ ಬಂದಿದ್ದು, ಮಾಲೀಕನ ನಡುವಳಿಕೆ ಅಸಂವಿಧಾನಿಕ ಮತ್ತು ಸ್ವೀಕಾರಾರ್ಹವಲ್ಲ ಎಂದು ಕರೆದಿದ್ದಾರೆ.

ವೈರಲ್ ವಿಡಿಯೋ ಭಾರಿ ಆಕ್ರೋಶ

ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವರ್ಗವು ಖಾನ್ ಫ್ಲಾಟ್​ನ್ನು ಮಾಲೀಕರು ಆರಂಭದಲ್ಲಿ ಬಾಡಿಗೆಗೆ ನೀಡಲು ಒಪ್ಪಿನಂತರ ಧಾರ್ಮಿಕ ಕಾರಣದಿಂದ ಹೀಗೆ ಮಾಡಿದ್ದು ತಪ್ಪು ಎಂದು ಆರೋಪಿಸಿದ್ದಾರೆ.
ಇನ್ನು ಕೆಲವರು ಇದು ಇಸ್ಲಾಮೋಫೋಬಿಯಾಗೆ ಉತ್ತಮ ಉದಾಹರಣೆಯಾಗಿದ್ದು, ಇದನ್ನು ಮಾಲೀಕರ ಆಯ್ಕೆ ಎಂದು ಮರೆಮಾಚದಿರಿ ಎಂದಿದ್ದಾರೆ. ಧರ್ಮದ ಆಧಾರದ ಮೇಲೆ ವಸತಿ ಸೌಕರ್ಯಗಳನ್ನು ಪಡೆಯುವಲ್ಲಿ ತಾರತಮ್ಯವು ಅಸಂವಿಧಾನಿಕವಾಗಿದೆ ಮತ್ತು ಅದನ್ನು ಸಾಮಾನ್ಯೀಕರಿಸಬಾರದು ಎಂದು ಬುಷ್ರಾ ಅಲಿ ಬೆಂಬಲಿಗರು ಹೇಳಿದ್ದಾರೆ.
ಮತ್ತೊಂದು ವರ್ಗದ ಜನರು ಇದು ಅವರ ವೈಯಕ್ತಿಕ ವಿಚಾರವಾಗಿದ್ದು, ಇದಕ್ಕೆ ಧರ್ಮದ ಲೇಪನ ಮಾಡಬೇಡಿ. ಸೂಕ್ತ ವಿಚಾರಣೆ ನಡೆಸಿದರೆ ನೈಜ ಮಾಹಿತಿ ಹೊರಬೀಳುತ್ತದೆ. ಯಾರಿಗೆ ಗೊತ್ತು ಈ ಮಹಿಳೆಯ ತಪ್ಪು ಇರಬಹುದೇನೋ? ಎಂಬ ತಾರ್ಕಿಕ ಪ್ರಶ್ನೆ ಎತ್ತಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net