ಚುಚ್ಚಬೇಕೆನ್ನಿಸಿತು, ಚುಚ್ಚಿಬಿಟ್ಟೆ: ಸುಖ್ಬೀರ್ ಬಾದಲ್ ಮೇಲೆ ಮಾರಣಾಂತಿಕ ದಾಳಿ, ಆರೋಪಿ ವಶಕ್ಕೆ; ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ! Sukhbir Singh Badal

ಪಂಜಾಬ್​ ಮಾಜಿ ಡಿಸಿಎಂ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಮಾರಣಾಂತಿಕ ದಾಳಿ
ಪಂಜಾಬ್​ ಮಾಜಿ ಡಿಸಿಎಂ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಮಾರಣಾಂತಿಕ ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಪಂಜಾಬ್​ ಮಾಜಿ ಡಿಸಿಎಂ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಮಾರಣಾಂತಿಕ ದಾಳಿ
  • ಕೃಪಾಣ್​ ಮೂಲಕ ಹಲ್ಲೆ ನಡೆಸಿದ ಜಸ್ಪಾಲ್​ ಸಿಂಗ್​ ಬಂಧನ
  • ಚುಚ್ಚಬೇಕೆನ್ನಿಸಿತು, ಚುಚ್ಚಿಬಿಟ್ಟೆ: ಆರೋಪಿ ಪ್ರತಿಕ್ರಿಯೆ
  • ಬಾದಲ್​ ಪತ್ನಿಗೆ ಕರೆಮಾಡಿ ಸುಖ್ಬೀರ್ ಸಿಂಗ್ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ಮುಂಬೈ: ಗುರುವಾರ (ಆ.13) ಮಹಾರಾಷ್ಟ್ರದ ನಾಂದೇಡ್​ನಲ್ಲಿರುವ ಗುರುದ್ವಾರ ಮಾತಾ ಸಾಹಿಬ್ ಕೌರ್​ಗೆ ಬೇಟಿ ನೀಡಿದ್ದ ಸಂದರ್ಭದಲ್ಲಿ ಪಂಜಾಬ್​ನ ಮಾಜಿ ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ (Sukhbir Singh Badal) ಮೇಲೆ ಮಾರಣಾಂತಿಕ ದಾಳಿ ನಡೆದಿದೆ.

ಗುರುದ್ವಾರಾ ಹೊರಗಡೆ ಅಕಾಲಿ ನಾಯಕನ ಮೇಲೆ ಏಕಾಏಕಿ ದಾಳಿ ನಡೆಸಿದ ನಿಹಾಂಗ್​​ ಸಿಖ್​​ ಜಸ್ಪಾಲ್​ ಸಿಂಗ್​ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಚುಚ್ಚ ಬೇಕೆನ್ನಿಸಿತು ಚುಚ್ಚಿಬಿಟ್ಟೆ!

ಗುರುದ್ವಾರಾದ ದರ್ಶನಕ್ಕಾಗಿ ಪಂಜಾಬ್​ನ ಮಾಜಿ ಡಿಸಿಎಂ ಹಾಗೂ ಅಕಾಲಿ ದಳದ ನಾಯಕನಾಗಿರುವ ಸುಖ್ಬೀರ್ ಸಿಂಗ್ ಬಾದಲ್ ಆಗಮಿಸಿದ್ದಾಗ, ಈ ಜಸ್ಪಾಲ್​ ಸಿಂಗ್​ ತನ್ನ ಕೃಪಾಣ್​ (ಚಾಕು) ಹೊರ ತೆಗೆದು ಬಾದಲ್​ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ ಬಾದಲ್​ ಅವರ ಕೈಗೆ ಗಾಯವಾಗಿದ್ದು, ಅವರ ಅಂಗರಕ್ಷಕನಿಗೆ ಸಹ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ, ಸದ್ಯ ಬಾದಲ್​, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೊಂದು ಕಡೆ ಪೊಲೀಸರು ಈ ಜಸ್ಪಾಲ್​ ಸಿಂಗ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಜಸ್ಪಾಲ್​ ಸಿಂಗ್​, ಬಾದಲ್​ ಮೇಲೆ ಏಕೆ ದಾಳಿ ನಡೆಸಿದೆ ಎಂದು ಕೇಳಿದಕ್ಕೆ, ಬಾದಲ್​ ಮೇಲೆ ದಾಳಿ ಮಾಡಬೇಕೆಂದು ನನಗೆ ಅನ್ನಿಸಿತು, ಹೀಗಾಗಿ ಕೃಪಾಣ್​ನಿಂದ ದಾಳಿ ಮಾಡಿದೆ ಎಂದು ಹೇಳಿದ್ದಾನೆ. ಆದರೆ ಪೊಲೀಸರು ಈ ಉತ್ತರದಿಂದ ಸಂತುಷ್ಟರಾದಂತೆ ಕಾಣುತ್ತಿಲ್ಲ ಎಂದು ಹೇಳಲಾಗುತ್ತಿದೆ.


ಈ ಜಸ್ಪಾಲ್​ ಸಿಂಗ್​ ಕಳೆದ ಎರಡು ವರ್ಷಗಳಿಂದ ಗುರುದ್ವಾರ ಮಾತಾ ಸಾಹಿಬ್ ಕೌರ್​ನಲ್ಲಿ ಸೇವೆ ಮಾಡುತ್ತಿದ್ದಾಗಿ ತಿಳಿದು ಬಂದಿದೆ. ಪೊಲೀಸರು ಈ ಜಸ್ಪಾಲ್​ ಸಿಂಗ್​ನ ಹಿನ್ನಲೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಮುಂದಾಗಿದ್ದಾರೆಂದು ಮಾಹಿತಿ ಲಭ್ಯವಾಗಿದೆ.

ಬಾದಲ್​ ಪತ್ನಿಗೆ ಪ್ರಧಾನಿ ಕರೆ!

ಪಂಜಾಬ್​ನ ಮಾಜಿ ಡಿಸಿಎಂ ಮೇಲೆ ದಾಳಿ ನಡೆದ ಸುದ್ದಿ ಕೇಳಿದ ಪ್ರಧಾನಿ ನರೇಂದ್ರ ಮೋದಿ, ಸುಖ್ಬೀರ್ ಸಿಂಗ್ ಬಾದಲ್ ಪತ್ನಿ, ಹರ್ಸಿಮ್ರತ್ ಕೌರ್ ಬಾದಲ್ ಅವರಿಗೆ ಫೋನ್​ ಕರೆ ಮೂಲಕ ಸಂಪರ್ಕಿಸಿ, ಬಾದಲ್​ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆಂದು ತಿಳಿದು ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ, ಸುಖ್ಬೀರ್ ಸಿಂಗ್ ಬಾದಲ್, ಪ್ರಧಾನಿ ನರೇಂದ್ರ ಮೋದಿಯನ್ನು ಬೇಟಿಯಾಗಿದ್ದರು. ಈ ಸಂದರ್ಭದಲ್ಲಿ ಮುಂಬರುವ ಪಂಜಾಬ್​ ವಿಧಾನಸಭಾ ಚುನಾವಣೆಯಲ್ಲಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು.
ಈಗ ಮೋದಿ ಬೇಟಿ ಮಾಡಿದ ನಂತರ, ಬಾದಲ್​ ಮೇಲೆ ದಾಳಿ ನಡೆದಿದ್ದು, ಪಂಜಾಬ್​ ರಾಜಕಾರಣದಲ್ಲಿ ರಾಷ್ಟ್ರೀಯ ಪಕ್ಷಗಳ ಮೇಲಿನ ದ್ವೇಷ ಇನ್ನೂ ಕಡಿಮೆಯಾಗಿಲ್ಲ ಎಂಬುದರ ಸೂಚನೆ ಎನ್ನುವುದು ಕೆಲ ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net