ಕರೂರ್: ಕರೂರ್ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದ ಒಂಬತ್ತು ತಿಂಗಳ ನಂತರ, ಮುಖ್ಯಮಂತ್ರಿ ವಿಜಯ್ ಶುಕ್ರವಾರ ಮೊದಲ ಬಾರಿಗೆ ನಗರಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಲ್ಲದೆ, ಅಂದಿನ ಡಿಎಂಕೆ ಸರ್ಕಾರದ ಪೊಲೀಸ್ ಇಲಾಖೆಯ ತೀವ್ರ ವೈಫಲ್ಯವೇ ದುರಂತಕ್ಕೆ ಕಾರಣ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.