ನಮ್ಮಿಬ್ಬರ ಮಧ್ಯೆ ಮೊದಲೇ ಒಪ್ಪಂದ ಆಗಿತ್ತು! ಯೂಟ್ಯೂಬರ್​ ಪತ್ನಿ ಬಸ್​ ಕಂಡಕ್ಟರ್​ ಜತೆ ಓಡಿಹೋದ ಕೇಸ್​ಗೆ ಮತ್ತೊಂದು ಬಿಗ್​ ಟ್ವಿಸ್ಟ್ Akhil NRD ​

ನಾನು ಅನೂಪ್​ ಒಟ್ಟಿಗೆ ಇದ್ದೀವಿ! ಆದ್ರೆ... ಯೂಟ್ಯೂಬರ್​ ಪತ್ನಿ ಬಸ್​ ಕಂಡಕ್ಟರ್​ ಜತೆ ಓಡಿಹೋದ ಕೇಸ್​ಗೆ ಮತ್ತೊಂದು ಬಿಗ್​ ಟ್ವಿಸ್ಟ್ Akhil NRD ​
ನಾನು ಅನೂಪ್​ ಒಟ್ಟಿಗೆ ಇದ್ದೀವಿ! ಆದ್ರೆ... ಯೂಟ್ಯೂಬರ್​ ಪತ್ನಿ ಬಸ್​ ಕಂಡಕ್ಟರ್​ ಜತೆ ಓಡಿಹೋದ ಕೇಸ್​ಗೆ ಮತ್ತೊಂದು ಬಿಗ್​ ಟ್ವಿಸ್ಟ್ Akhil NRD ​
Published on

ಪ್ರಮುಖ ಮುಖ್ಯಾಂಶಗಳು

  • ಭಾರಿ ಸುದ್ದಿಯಲ್ಲಿರುವ ಮಲಯಾಳಂ ಕಂಟೆಂಟ್‌ ಕ್ರಿಯೇಟರ್‌ ಅಖಿಲ್‌ ಎನ್‌ಆರ್‌ಡಿ ಮತ್ತು ಮೇಘಾ ದಂಪತಿ
  • ಗಂಡನನ್ನು ಬಿಟ್ಟು ಬಸ್‌ ಕಂಡಕ್ಟರ್‌ ಜತೆ ಓಡಿಹೋಗಿದ್ದಾರೆಂಬ ವದಂತಿ ಬಗ್ಗೆ ಮೊದಲ ಪ್ರತಿಕ್ರಿಯೆ
  • ಅಖಿಲ್​ ಮನೆಯಿಂದ ಚಿನ್ನ, ನಗದು ಕದ್ದ ಆರೋಪಗಳಿಗೆ ಎರಡನೇ ಬಾರಿಗೆ ಪ್ರತಿಕ್ರಿಯೆ
  • ಅಖಿಲ್ ಬಿಟ್ಟು ಬರಲು ನನಗೆ ಕೆಲವು ಬಲವಾದ ಕಾರಣಗಳಿವೆ ಎಂದ ಮೇಘಾ ನಾಯರ್​
ತಿರುವನಂತಪುರಂ: ಮಲಯಾಳಂ ಹೆಸರಾಂತ ಕಂಟೆಂಟ್ ಕ್ರಿಯೇಟರ್ ಅಖಿಲ್ ಎನ್‌ಆರ್‌ಡಿ ( Akhil NRD ) ಮತ್ತು ಮೇಘಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಜನಪ್ರಿಯತೆ ಪಡೆದಿರುವ ದಂಪತಿ. ಆದರೆ, ಇತ್ತೀಚೆಗಷ್ಟೇ ಅಖಿಲ್ ಪತ್ನಿ ಮೇಘಾ ರಾತ್ರೋ ರಾತ್ರಿ ಮನೆಬಿಟ್ಟು ಬಸ್​ ಕಂಡಕ್ಟರ್​ ಜತೆ ಪರಾರಿಯಾದ ಘಟನೆ ಸದ್ಯ ಭಾರಿ ಆಕ್ರೋಶ, ಛೀಮಾರಿಗಳಿಗೆ ಕಾರಣವಾಗಿದೆ. ಈ ಸುದ್ದಿ ಕೇರಳದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಹೊತ್ತಿನಲ್ಲೇ ಎಲ್ಲಿಯೂ ಪತ್ತೆಯಾಗದ ಮೇಘಾ ಇದೀಗ ದಿಢೀರ್ ಎನ್ನುವಂತೆ ಎರಡನೇ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಪ್ರಶ್ನೆಗಳ ಸುರಿಮಳೆ 

ಪತಿಯನ್ನು ಬಿಟ್ಟು ಬಸ್​ ಕಂಡಕ್ಟರ್​ ಜತೆ ಓಡಿಹೋಗಿರುವುದಕ್ಕೆ ಮೇಘಾ ವಿರುದ್ಧ ಸಾಕಷ್ಟು ಅಸಮಾಧಾನ ವ್ಯಕ್ತವಾಗುತ್ತಿವೆ. ಈ ಟೀಕೆಗಳಿಗೆ ಮೊನ್ನೆಯಷ್ಟೇ ಮೊದಲ ಬಾರಿಗೆ ಮೌನ ಮುರಿದ ಮೇಘಾ, ಚೆಂಗನ್ನೂರಿನಲ್ಲಿರುವ ತಮ್ಮ ತಂದೆಯ ಮನೆಯಿಂದ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ನಾನು ತಂದೆಯ ಮನೆಯಲ್ಲಿದ್ದೇನೆ ಎಂದು ಹೇಳಿಕೊಂಡರು. ಈ ಮೂಲಕ ತಮ್ಮ ವಿರುದ್ಧ ಹರಿದಾಡುತ್ತಿರುವ ವದಂತಿಗಳಿಗೆ ವ್ಯತಿರಿಕ್ತವಾಗಿ, ತಾನು ಬೇರೆ ಯಾರ ಜೊತೆಯೂ ಇಲ್ಲ, ಬದಲಿಗೆ ಒಂಟಿಯಾಗಿದ್ದೇನೆ ಎನ್ನುವ ರೀತಿಯಲ್ಲಿ ಪೋಸ್ಟ್​​ ಮಾಡಿದ್ದರು. ಇದಕ್ಕೆ ಇನ್ನೊಂದಿಷ್ಟು ಪ್ರಶ್ನೆಗಳ ಸುರಿಮಳೆ ಹರಿದುಬಂದ ಬೆನ್ನಲ್ಲೇ ಆಕೆ ಹೊಸದೊಂದು ಪೋಸ್ಟ್ ಹಾಕಿದ್ದಾರೆ. 
ವಿವಾದಗಳ ಕುರಿತಾಗಿ ಮತ್ತೊಮ್ಮೆ ಸ್ಪಷ್ಟಪಡಿಸಲು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೊಸದೊಂದು ಪೋಸ್ಟ್​ ಹಂಚಿಕೊಂಡಿರುವ ಆಕೆ, ನಾನು ಅಖಿಲ್​ ಬಿಟ್ಟು ಓಡಿಬಂದಿದ್ದು ನಿಜ. ಆದರೆ, ಅವರ ಮನೆಯಿಂದ ಹೊರಬರುವಾಗ ಚಿನ್ನ ಮತ್ತು ಇತರ ವಸ್ತುಗಳನ್ನು ಹೊತ್ತುಕೊಂಡು ಬಂದಿದ್ದೇನೆ ಎಂಬ ಸುದ್ದಿ ಶುದ್ಧ ಸುಳ್ಳು. ಇತರರ ಯಾವುದೇ ವಸ್ತುಗಳನ್ನು ನಾನು ತೆಗೆದುಕೊಂಡಿಲ್ಲ. ಬದಲಿಗೆ ನನಗೆ ಸಂಬಂಧಿಸಿದ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಬಂದಿರುವೆ ಎಂದು ಹೇಳಿದ್ದಾರೆ.

ಒಪ್ಪಂದಕ್ಕೆ ಸಹಿ ಹಾಕಿದ್ದೇವೆ

ಮನೆ ಬಿಟ್ಟು ಓಡಿಬಂದಿದ್ದೇನೋ ಸತ್ಯ. ಆ ಬಳಿಕ ಅನೂಪ್ ಜತೆ 10 ದಿನಗಳ ಕಾಲ ಜತೆಗಿದ್ದೆ. ಈ ಮಧ್ಯೆ, ನಾನು ನನ್ನ ತಂದೆಯನ್ನು ನೋಡಲು ಮನೆಗೆ ಹೋಗಿದ್ದೆ. ಆಗ ನಾನು ತೆಗೆದ ಫೋಟೋಗಳನ್ನು ಪೋಸ್ಟ್ ಮಾಡಿದೆ. ಅದಾದ ಒಂದು ದಿನದ ಬಳಿಕ ನಾನು ಮತ್ತೆ ಅನೂಪ್ ಮನೆಗೆ ಹಿಂತಿರುಗಿದೆ. ನಾನು ಇನ್ನೂ ಅಲ್ಲೇ ಇದ್ದೇನೆ. ಅಖಿಲ್​ನ ಬಿಟ್ಟು ಹೊರಬರಲು ಕೆಲವು ಬಲವಾದ ಕಾರಣಗಳಿವೆ. ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ನನಗೆ ಇಷ್ಟವಿಲ್ಲ. ಇದಕ್ಕಿಂತ ಮುಖ್ಯವಾಗಿ, ನಾವಿಬ್ಬರು ಪರಸ್ಪರ ಯಾವುದೇ ಆರೋಪಗಳನ್ನು ಹಂಚಿಕೊಳ್ಳುವುದಿಲ್ಲ ಎಂಬ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ನನ್ನ ಅಥವಾ ಅಖಿಲ್​ರ ಸ್ನೇಹಿತರೆಂದು ಹೇಳಿಕೊಳ್ಳುವ ಜನರು ಅನೇಕ ವಿಷಯಗಳನ್ನು ಬೊಗಳುತ್ತಿದ್ದಾರೆ. ಇಂತಹವರ ಮಾತುಗಳನ್ನು ಯಾರೂ ನಂಬಬಾರದು ಎಂದಿದ್ದಾರೆ. 
ಅಖಿಲ್ ಎನ್ಆರ್​ಡಿ ಮತ್ತು ಮೇಘಾ ನಾಯರ್ ಅವರ ಸುದ್ದಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದ ಸೃಷ್ಟಿಸಿದ್ದು, ಗಂಡನನ್ನು ಬಿಟ್ಟು ಇನ್ನೊಬ್ಬರ ಜತೆ ಓಡಿಹೋದ ಹೆಂಡತಿ ಇವಳು ಎಂದು ಅನೇಕರು ಜಾಲತಾಣಗಳಲ್ಲಿ ಮೇಘಾ ವಿರುದ್ಧ ಸಿಡಿದೆದ್ದಿದ್ದಾರೆ. ಈ ವಿಷಯ ತೀವ್ರ ಬಿಸಿ ಬಿಸಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಎರಡನೇ ಬಾರಿಗೆ ಪೋಸ್ಟ್​ ಮಾಡುವ ಮೂಲಕ ತನ್ನ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಉತ್ತರಿಸಿರುವ ಮೇಘಾ ನಾಯರ್​ಗೆ ನೆಟ್ಟಿಗರ ಛೀಮಾರಿ ತಪ್ಪಿಲ್ಲ. ಇದೀಗ ಈ ಬಗ್ಗೆ ದೀರ್ಘವಾಗಿ ಬರೆದು ಪೋಸ್ಟ್ ಹಂಚಿಕೊಂಡಿರುವ ಅಖಿಲ್​ ಪತ್ನಿ ವಿರುದ್ಧ ಭಾರಿ ಅಸಮಾಧಾನಗಳು ವ್ಯಕ್ತವಾಗಿವೆ.

ಏನಿದು ಘಟನೆ? 

ಅಂದಹಾಗೆ, ಮೇಘಾ ಅವರು ಎಲ್‌ಎಲ್‌ಬಿ (LLB) ಪದವಿ ಪಡೆದಿದ್ದಾರೆ. ಆದರೆ, ಅವರು ವಕೀಲ ವೃತ್ತಿಯನ್ನು ಅಭ್ಯಾಸ ಮಾಡಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಅಖಿಲ್ ಮತ್ತು ಮೇಘಾ ದೀರ್ಘಕಾಲದ ಪ್ರೇಮ ಸಂಬಂಧದಲ್ಲಿದ್ದರು. ಇವರ ಪ್ರೇಮವು ಲಾ ಕಾಲೇಜಿನಲ್ಲಿ ಅಥವಾ ಅದಕ್ಕೂ ಮುಂಚೆಯೇ ಪ್ರಾರಂಭವಾಗಿರಬಹುದು. ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಇಬ್ಬರು ಮದುವೆಯಾಗಲು ನಿರ್ಧರಿಸಿದರು. ನಂತರ ಅಖಿಲ್ ಮತ್ತು ಮೇಘಾ 2024ರ ನವೆಂಬರ್ ತಿಂಗಳಲ್ಲಿ ಸಾಂಪ್ರದಾಯಿಕ ಸಮಾರಂಭದಲ್ಲಿ ವಿವಾಹವಾದರು.
ಅಖಿಲ್ ಮತ್ತು ಮೇಘಾ ದಂಪತಿಗೆ ಮಕ್ಕಳಿಲ್ಲ. ಮದುವೆಯ ನಂತರ ಅಖಿಲ್ ಅವರು ಮೇಘಾ ಅವರನ್ನು ವ್ಲಾಗಿಂಗ್ ಮಾಡಲು ಪ್ರೋತ್ಸಾಹಿಸಿದರು. ಇವರ ಲೈಫ್‌ಸ್ಟೈಲ್ ಮತ್ತು ಕಾಮಿಡಿ ವಿಡಿಯೋಗಳಲ್ಲಿ ಇವರಿಬ್ಬರನ್ನು ಜೊತೆಯಾಗಿ ನೋಡಲು ಅಭಿಮಾನಿಗಳು ತುಂಬಾ ಇಷ್ಟಪಡುತ್ತಿದ್ದರು. ಅಖಿಲ್ ಅವರ ಪ್ರೇಕ್ಷಕರೊಂದಿಗೆ ಪರಿಚಯವಾದ ನಂತರ, ಮೇಘಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮದೇ ಆದ ಪ್ರತ್ಯೇಕ ಪುಟವನ್ನು ಪ್ರಾರಂಭಿಸಿದರು. ಅವರು ಫ್ಯಾಷನ್ ಮತ್ತು ಬ್ಯೂಟಿಗೆ ಸಂಬಂಧಿಸಿದ ಕಂಟೆಂಟ್‌ಗಳನ್ನು ಪೋಸ್ಟ್ ಮಾಡುತ್ತಾರೆ.
ಮದುವೆಯ ನಂತರವೂ ಮೇಘಾ ಅವರು ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೊಂದಿದ್ದರು. ಅವರು ನಿರ್ದಿಷ್ಟ ಕೋರ್ಸ್ ಮಾಡಲು ಬಯಸಿದ್ದರು. ಆ ಬಯಕೆಯನ್ನು ಅರಿತ ಅಖಿಲ್, ಮೇಘಾರನ್ನು ಕೇಳದೆ ಆ ಕೋರ್ಸ್‌ಗೆ ಸೇರಿಸಿ ಸಪ್ರೈಸ್​ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಯ ಪ್ರಕಾರ, ಆ ಕೋರ್ಸ್‌ಗೆ ಹೋಗಲು ಮೇಘಾ ಅವರು ಬಸ್‌ನಲ್ಲಿ ಪ್ರಯಾಣಿಸಬೇಕಿತ್ತು. ಆ ಸಂದರ್ಭದಲ್ಲಿ ಬಸ್ ಕಂಡಕ್ಟರ್ ಪರಿಚಯವಾಗಿದ್ದು, ಕಾಲಕ್ರಮೇಣ ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆಯಿತು ಎನ್ನಲಾಗಿದೆ. 

ಸರ್ಕಾರಿ ಕೆಲಸ ಸಿಕ್ಕ ಬೆನ್ನಲ್ಲೇ ಓಡಿಹೋದ ಮೇಘಾ

ಕೊನೆಗೆ ಮೇಘಾ ಸ್ಥಳೀಯ ಬಸ್ ಕಂಡಕ್ಟರ್ ಜತೆ ಓಡಿಹೋಗಿದ್ದಾರೆ. ಆ ಕಂಡಕ್ಟರ್​ಗೆ ಇತ್ತೀಚೆಗೆ ಸರ್ಕಾರಿ ಉದ್ಯೋಗ ದೊರೆತಿತ್ತು. ಮೇಘಾ ಅವರು ತಮ್ಮೊಂದಿಗೆ ಹಣ, ಆಭರಣಗಳು ಹಾಗೂ ಇತ್ಯಾದಿ ದುಬಾರಿ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಅದರಲ್ಲಿ ಮೇಘಾ ಅವರು ನೈಟ್‌ಗೌನ್ ಧರಿಸಿ ಓಡಿಹೋಗುತ್ತಿರುವುದು ಕಂಡುಬಂದಿದೆ. 
ಮೇಘಾ ಓಡಿಹೋಗಿರುವ ಬಗ್ಗೆ ಅಖಿಲ್‌ಗೆ ಯಾವುದೇ ಸುಳಿವು ಇರಲಿಲ್ಲ ಮತ್ತು ಅವರು ನಾಪತ್ತೆಯಾಗಿದ್ದಾರೆ ಎಂದೇ ಅಖಿಲ್ ಭಾವಿಸಿದ್ದರು. ಈ ವಿಷಯ ಬೆಳಕಿಗೆ ಬರುವ ಮುಂಚೆಯೇ ಅಖಿಲ್ ನಾಪತ್ತೆ ದೂರು ದಾಖಲಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ ನಂತರ ಅವರಿಗೆ ಸತ್ಯಾಂಶ ತಿಳಿದುಬಂದಿದೆ. ವೈರಲ್ ಆಗಿರುವ ಆ ವಿಡಿಯೋದಲ್ಲಿ, ರಾತ್ರಿಯ ವೇಳೆ ಮೇಘಾ ಅವರು ಬಸ್ ಕಂಡಕ್ಟರ್ ಜೊತೆ ಓಡಿಹೋಗುತ್ತಿರುವುದು ಕಂಡುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವರು ನೈಟ್‌ಗೌನ್ ಧರಿಸಿ ಸೂಟ್‌ಕೇಸ್ ಹಿಡಿದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಅದರಲ್ಲಿ ಒಬ್ಬ ವ್ಯಕ್ತಿಯು ಮೇಘಾಳಿಗಾಗಿ ಕಾಯುತ್ತಿರುವುದು ಮತ್ತು ನಂತರ ಇಬ್ಬರೂ ಒಟ್ಟಿಗೆ ಓಡಿಹೋಗುತ್ತಿರುವುದು ಕಾಣಿಸಿಕೊಂಡಿದೆ. ಇದೀಗ ಮೇಘಾ ಅವರು ತಮ್ಮ ತಂದೆಯ ಮನೆಯಲ್ಲಿ ಕಾಣಸಿಕೊಂಡಿರುವುದು ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಂತಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net