ಭಯದಿಂದ ಪ್ಯಾಂಟ್‌ನಲ್ಲೇ ಉಚ್ಚೆ ಹೊಯ್ದುಕೊಂಡಿದ್ದೆ! ಐಪಿಎಲ್ನಲ್ಲಿ ಅಂದು ಮ್ಯಾಚ್ ಫಿಕ್ಸಿಂಗ್, ಇಂದು ಬಾಲ್ ಫಿಕ್ಸಿಂಗ್; ದಾವೂದ್ ಬಗ್ಗೆ ಲಲಿತ್ ಮೋದಿ ಹೇಳಿದ್ದೇನು? Lalit Modi On Dawood Ibrahim
ದಾವೂದ್ ಇಬ್ರಾಹಿಂ ಮತ್ತು ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಮಾತನಾಡಿದ ಲಲಿತ್ ಮೋದಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನನಗೆ ದಾವೂದ್ ಇಬ್ರಾಹಿಂ ಬೆದರಿಕೆ ಒಡ್ಡಿದ್ದ
ನನ್ನ ಮೇಲೆ ಕೊಲೆಯತ್ನ ಹಾಗೂ ನನ್ನ ಮಗನನ್ನು ಅಪಹರಣ ಮಾಡಿಸಿದ್ದ
ನಾನು ಹೆದರಿ ಒಮ್ಮೆ ಪ್ಯಾಂಟನಲ್ಲಿ ಉಚ್ಚೆ ಹುಯ್ದುಕೊಂಡಿದ್ದೆ
ದಾವೂದ್ ಇಬ್ರಾಹಿಂ ಮತ್ತು ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಮಾತನಾಡಿದ ಲಲಿತ್ ಮೋದಿ
ಅಂದು ಮ್ಯಾಚ್ ಫಿಕ್ಸ್ ಆಗುತ್ತಿತ್ತು, ಈಗ ಪ್ರತಿ ಬಾಲ್ ಫಿಕ್ಸ್ ಆಗುತ್ತದೆ
ಲಂಡನ್: ಐಪಿಎಲ್ ಸ್ಥಾಪಕ, ಬಿಸಿಸಿಐನ ಮಾಜಿ ಉಪಾಧ್ಯಕ್ಷ ಹಾಗೂ ತೆರಿಗೆ ವಂಚನೆ ಪ್ರಕರಣದಲ್ಲಿ ಲಂಡನ್ ಸೇರಿರುವ ಉದ್ಯಮಿ ಲಲಿತ್ ಮೋದಿ ಇತ್ತೀಚೆಗೆ ಭೂಗತ ಜಗತ್ತು ಹಾಗೂ ಕ್ರಿಕೆಟ್ ನಡುವಿನ ಶಾಕಿಂಗ್ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
ತಾವು ಭಾರತದ ಕ್ರಿಕೆಟ್ ಆಡಳಿತ ಮಂಡಳಿಯಲ್ಲಿದ್ದ ಸಂದರ್ಭದಲ್ಲಿ ಭೂಗತ ಜಗತ್ತಿನಲ್ಲಿ ಸಕ್ರೀಯವಾಗಿದ್ದ ಡಿ-ಕಂಪನಿ ಲಲಿತ್ ಮೋದಿ (Lalit Modi On Dawood Ibrahim) ಗೆ ಯಾವ ರೀತಿ ಹಿಂಸೆ ನೀಡಿತ್ತು ಎಂದು ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ನಾನು ಭಾರತದಲ್ಲಿ ಐಪಿಎಲ್ ಆರಂಭಿಸಲು ಪ್ರಾರಂಭಸಿದಾಗ ಅದರಲ್ಲಿ ಯಾವುದೇ ಹಣದ ವ್ಯವಹಾರ ಎಂದರೆ ಬೆಟ್ಟಿಂಗ್ಗೆ ಅವಕಾಶ ನೀಡುತ್ತಿರಲಿಲ್ಲ. ಅದರೆ ದಾವೂದ್ ಇಬ್ರಾಹಿಂ ಆ ಸಮಯಕ್ಕೆ ಸುಮಾರು 2 ಬಿಲಿಯಲ್ ಡಾಲರ್ ಮೌಲ್ಯದ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ.
ಯಾವಾಗ ಐಪಿಎಲ್ನಲ್ಲಿ ಬೆಟ್ಟಿಂಗ್ ನಡೆಸಲು ನಾನು ಬಿಡಲಿಲ್ಲವೋ ಆಗ ನನಗೆ ದಾವೂದ್ ಇಬ್ರಾಹಿಂ ಮತ್ತು ಆತನ ಡಿ-ಕಂಪನಿಯವರು ಜೀವ ಬೆದರಿಕೆಯನ್ನು ಒಡ್ಡಿದ್ದರು. ಒಂದು ಸಲ ನಾನು ನನ್ನ ಪ್ಯಾಂಟ್ನಲ್ಲಿ ಉಚ್ಚೆ ಹುಯ್ದುಕೊಂಡಿದ್ದು ಇದೆ. ಇವರ ಉಪಟಳ ಹೆಚ್ಚುತ್ತಾ ಹೋದಂತೆ ನಾನು ಕ್ರಿಕೆಟ್ ಆಡಳಿತದಿಂದ ಕೆಳಗಿಳಿಯ ಬೇಕಾಯಿತೆಂದು ಲಲಿತ್ ಮೋದಿ ಹೇಳಿದ್ದಾರೆ.
ಈಗ ಪ್ರತಿ ಬಾಲ್ ಫಿಕ್ಸ್ ಆಗುತ್ತಿದೆ!
ಆ ದಿನಗಳ ಬೆಟ್ಟಿಂಗ್ಗೆ ಮತ್ತು ಇಂದಿನ ಬೆಟ್ಟಿಂಗ್ಗೆ ಬಹಳ ವ್ಯತ್ಯಾಸವಿದೆ. ಮೊದಲೆಲ್ಲಾ ಆಟಗಾರರನ್ನು ಬುಕ್ ಮಾಡಿಕೊಂಡು ಪಂದ್ಯವನ್ನು ಗೆಲ್ಲುವಂತೆ ಅಥವಾ ಸೋಲುವಂತೆ ಮಾತ್ರ ಮಾಡುತ್ತಿದ್ದರು.
ಆದರೆ ಈಗ ಪ್ರತಿ ಓವರ್, ಪ್ರತಿ ಬಾಲ್ನ್ನು ಫಿಕ್ಸ್ ಮಾಡುತ್ತಾರೆ. ನನಗೆ ತಿಳಿದ ಮಟ್ಟಿಗೆ ಈ ಬೆಟ್ಟಿಂಗ್ ಮಾರ್ಕೆಟ್ ಸುಮಾರು 4 ಬಿಲಿಯನ್ ಡಾಲರ್ನ್ನು ದಾಟಿದೆ. ಈಗ ಮ್ಯಾಚ್ ಫಿಕ್ಸಿಂಗ್ಗಿಂತ ಬಾಲ್ ಫಿಕ್ಸಿಂಗ್ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.
ನನ್ನ ಮೇಲೆ ದಾಳಿ, ಮಗನ ಅಪಹರಣ!
ನಾನು ಐಪಿಎಲ್ ನ ಎರಡನೇ ಅವೃತ್ತಿಯನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲು ಮುಂದಾದೆ. ಇದರಿಂದ ದಾವೂದ್ನ ಬೆಟ್ಟಿಂಗ್ ದಂಧೆಗೆ ಏಟು ಬಿತ್ತು. ಹೀಗಾಗಿ ಅವನು ಮುಂಬೈನಲ್ಲಿರುವ ನನ್ನ ಮನೆ ಮೇಲೆ ಬುಲೆಟ್ ಫೈರಿಂಗ್ ಮಾಡಿಸಿದ. ಆಗ ಮುಂಬೈ ಪೊಲೀಸರು ನನಗೆ ಝಡ್ ಲೆವೆಲ್ ರಕ್ಷಣೆ ನೀಡಿದ್ದರು.
ಜೋಹಾನ್ಸ್ಬರ್ಗ್ನಲ್ಲಿ ನನ್ನ ಮೇಲೆ ಕೊಲೆ ಯತ್ನ ನಡೆಯಿತು. ಲಂಡನ್ಲ್ಲಿ ನನ್ನ ಮಗನನ್ನು ಅಪಹರಣ ಮಾಡಿದರು. ಅದ್ದರಿಂದ ನಾನು ಭಾರತದ ಕ್ರಿಕೆಟ್ ಆಡಳಿತದಿಂದ ಹೊರಬರಲು ದಾವೂದ್ ಕೂಡ ಒಂದು ದೊಡ್ಡ ಕಾರಣ ಎಂದು ಲಲಿತ್ ಮೋದಿ ಹೇಳಿದ್ದಾರೆ, (ಏಜನ್ಸೀಸ್).