'ಕಟೌಟ್​ಗಳನ್ನಿಟ್ಟೇ ವಿಜಯ್​ ಗೆದ್ಬಿಟ್ರು, ಜನರ ಆಶಯ ತಿಳಿಯಲು ನನಗೆ 15 ವರ್ಷ ಬೇಕಾಯ್ತು'; Pawan Kalyan

Pawan Kalyan On Vijay
Pawan Kalyan On Vijay
Published on
Pawan Kalyan On Vijay: ಇತ್ತೀಚೆಗೆ ತಮಿಳುನಾಡು ರಾಜಕೀಯ ವಿಚಾರಗಳನ್ನು ಗಮನಿಸುತ್ತಿದ್ದೇ‌ನೆ. ಎಷ್ಟು ಸುಲಭವಾಗಿ ಗೆದ್ದುಬಿಟ್ರು. ನಂಗೆ ಜಲಸ್ ಆಗ್ತಿದೆ ಅವರ ಮೇಲೆ. ನಾನು ಹದಿನೈದು ವರ್ಷ ಬೀದಿಗಳಲ್ಲಿ ಅಲೆದಾಡಿದ್ರು ಪ್ರಯೋಜನವಾಗ್ಲಿಲ್ಲ...ಹೀಗೆಂದು ಮಾತನಾಡುತ್ತ ನೆರೆದಿದ್ದ ಸಭೆಯನ್ನು ನಗೆ ಅಲೆಯಲ್ಲಿ ತೇಲಿಸಿದ್ದು ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್.
ಎರಡು ವರ್ಷದ ಹಿಂದೆ ತಮಿಳಿಗ ವೆಟ್ರಿ ಕಳಗಂ ಪಕ್ಷ ಕಟ್ಟಿದ್ದ ವಿಜಯ್ ಅವರು, ವಿಧಾನಸಭೆ ಚುನಾವಣೆಯಲ್ಲಿ ಮೊದಲಬಾರಿಗೆ ಸ್ಪರ್ಧಿಸಿ ಭರ್ಜರಿಯಾಗಿ ಜಯಭೇರಿ ಸಾಧಿಸಿದ್ದರು. ನಟನಿಂದ ಮುಖ್ಯಮಂತ್ರಿಯಾಗಿ ಉದಯಿಸಿರುವ ವಿಜಯ್ ಅವರ ಈ ಐತಿಹಾಸಿಕ ಯಶಸ್ಸಿನ ಬಗ್ಗೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಾತನಾಡಿದ್ದು ಹೀಗೆ...

ಏನಂದ್ರು ಪವನ್ ಕಲ್ಯಾಣ್?

ನಾನು ಈ ನಡುವೆ ತಮಿಳುನಾಡಿನ ರಾಜಕೀಯ ಬೆಳವಣಿಗೆಯನ್ನು ಗಮನಿಸುತ್ತಿದ್ದೇನೆ. ಎಷ್ಟು ಸುಲಭವಾಗಿ, ಸುಖವಾಗಿ ಚುನಾವಣೆಯಲ್ಲಿ ಗೆದ್ದು ಬಿಟ್ಟರು. ಕಟೌಟ್​ ಮತ್ತು ಹೊಲೊಗ್ರಾಮ್‌ಗಳನ್ನು ಮುಂದಿಟ್ಟುಕೊಂಡು ಎಷ್ಟು ಸುಲಭವಾಗಿ ಜಯ ಸಾಧಿಸಿಬಿಟ್ಟರು. ನಾನು ಹದಿನೈದು ವರ್ಷ ಬೀದಿ ಬೀದಿ ಅಲೆದಾಡಿದ್ದೇನೆ ಎಂದು ಜೋರಾಗಿ ನಕ್ಕ ನಂತರ ಇದೆಲ್ಲ ತಮಾಷೆ ಮಾಡ್ತಿದ್ದೇನೆ ಎಂದರು. ಆ ನಂತರ ವಿಜಯ್​ ಬಗ್ಗೆ ನನಗೆ ಜಲಸ್ ಇದೆ ಎಂದು ಪವನ್​ ಕಲ್ಯಾಣ್ ಹೇಳಿದರು.
ಆದರೆ, ನಾವು ಒಂದು ರೀತಿಯಲ್ಲಿ ಯೋಚಿಸಬೇಕು ಎಂದರೆ, ಏನನ್ನೇ ಮಾತನಾಡುವ ಮೊದಲು ಅದರ ಬಗ್ಗೆ ನಮಗೆ ಅಪಾರ ಜ್ಞಾನವಿರಬೇಕು. ನಾನು 15 ವರ್ಷಗಳ ಕಾಲ ಏಕೆ ಅಷ್ಟೊಂದು ಕಷ್ಟಪಟ್ಟೆ? ಏಕೆಂದರೆ ಒಂದು ಪಕ್ಷವನ್ನು ಮುನ್ನಡೆಸಬೇಕಾದರೆ ಲಕ್ಷಾಂತರ ಜನರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದು ತಮ್ಮ ರಾಜಕೀಯ ಜೀವನದ ಬಗ್ಗೆ ಹೇಳಿದರು.

ಡಿಸಿಎಂ ಆಗಿದ್ದು ಹೀಗೆ

2014ರಲ್ಲಿ ಪವನ್ ಕಲ್ಯಾಣ್ ಅವರು ಜನಸೇನಾ ಪಕ್ಷವನ್ನು ಕಟ್ಟಿದರು. ಆರಂಭದಲ್ಲಿ ಚುನಾವಣಾ ಹಿನ್ನಡೆ ಅನುಭವಿಸಿದ್ದರು. ಕೊನೆಗೆ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮೈತ್ರಿಕೂಟದೊಂದಿಗೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿದ್ದಾರೆ.
ತಮಿಳುನಾಡಿನ ಸಿಎಂ ವಿಜಯ್​​ ಅವರು ಟಿವಿಕೆ ಪಕ್ಷ ಸ್ಥಾಪಿಸಿದ ಕೇವಲ ಎರಡೇ ವರ್ಷಗಳಲ್ಲಿ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಸೋಲಿಸಿ ಸಿಎಂ ಆದರು. ಅವರೀಗ ಎನ್‌ಟಿಆರ್, ಎಂಜಿಆರ್ ಮತ್ತು ಜಯಲಲಿತಾ ಅವರಂತಹ ದಿಗ್ಗಜ ನಟ-ರಾಜಕಾರಣಿಗಳ ಸಾಲಿಗೆ ಸೇರಿದ್ದಾರೆ.

ಚಿರಂಜೀವಿಯಿಂದ ವಿಜಯ್​ಗೆ ಸಿಕ್ತು ವಿಶಸ್

ಮೆಗಾಸ್ಟಾರ್ ಚಿರಂಜೀವಿ ಅವರ ತಂಡವು ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ಕರೆ ಮಾಡಿ ಆತ್ಮೀಯವಾಗಿ ಅಭಿನಂದಿಸಿದ್ದಾರೆ. ಜನನಾಯಗನ್​ ಸಿನಿಮಾದ ಪೈರಸಿ ಸಮಸ್ಯೆಯ ಸಮಯದಲ್ಲಿ ಬೆಂಬಲ ನೀಡಿದ್ದಕ್ಕಾಗಿ ಚಿರಂಜೀವಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net