ಜಾರ್ಖಂಡ್: ಶಿಕ್ಷಣ ಸಂಸ್ಥೆಗಳನ್ನು ಜ್ಞಾನದ ದೇವಾಲಯಗಳೆಂದು ಹೇಳಲಾಗುತ್ತದೆ. ಆದರೆ, ಜಾರ್ಖಂಡ್ನ ಧನಬಾದ್ ಜಿಲ್ಲೆಯಲ್ಲಿ ಪ್ರೀತಿಯ ಅಮಲಿನಲ್ಲಿರುವ ವ್ಯಕ್ತಿಯೊಬ್ಬ ಶೈಕ್ಷಣಿಕ ಸಂಸ್ಥೆಯ ಘನತೆಯನ್ನು ಮರೆತು, ತನ್ನ ವೈಯಕ್ತಿಕ ಪ್ರೇಮ ಕಲಹವನ್ನು ಬೀದಿಗೆ ತಂದಿರುವ ಘಟನೆ ಬೆಳಕಿಗೆ ಬಂದಿದೆ. ಆದಾಗ್ಯೂ, ನಗರದ ಮಹಿಳಾ ಕಾಲೇಜಿನ ಮುಖ್ಯ ದ್ವಾರದ ಮೇಲೆ ವ್ಯಕ್ತಿಯೊಬ್ಬ ತನ್ನ ಗೆಳತಿಯ ಬಳಿ ಕ್ಷಮೆ ಕೇಳಲು ಸಾಲು ಸಾಲು ಪೋಸ್ಟರ್‌ಗಳನ್ನು (I Am Sorry Dimpi) ಅಂಟಿಸುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.