ನಾನು ಪಕ್ಷ ದ್ರೋಹಿಯಲ್ಲ; ಬಿಜೆಪಿ ಆಫರ್ ತಿರಸ್ಕರಿಸಿದೆ ಎಂದು ರಾಜೀನಾಮೆ ನೀಡಿದ ಸುಖೇಂದು ವಿರುದ್ಧ ಸೌಗತ್ ರಾಯ್ ಕಿಡಿ | Saugat Roy
ಮಮತಾ ಬ್ಯಾನರ್ಜಿ ಮತ್ತು ಸೌಗತ್ ರಾಯ್
Published on:
Copied
Follow Us
ನವದೆಹಲಿ: ಪಶ್ಚಿಮ ಬಂಗಾಳ ಚುನಾವಣೆ ಸೋಲಿನ ಬಳಿಕ ತೃಣಮೂಲ ಕಾಂಗ್ರೆಸ್ನಲ್ಲಿ ಬಂಡಾಯ ದಿನೇ-ದಿನೇ ಹೆಚ್ಚಾಗುತ್ತಿದ್ದು, ಪಕ್ಷ ಇಬ್ಬಾಗವಾಗುತ್ತಾ ಸಾಗುತ್ತಿರುವ ನಡುವೆ ಬಿಜೆಪಿ ನನಗೆ ತಮ್ಮ ಪಕ್ಷ ಸೇರುವಂತೆ ಆಫರ್ ನೀಡಿತ್ತು. ಆದರೆ ನಾನು ತಿರಸ್ಕರಿಸಿದೆ ಎಂದು ಸಂಸದ ಸೌಗತ್ ರಾಯ್(Saugat Roy) ಹೇಳಿದ್ದಾರೆ.
ಸೋಮವಾರ( ಜೂ. 08) ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿರುವ ಅವರು, ಬಿಜೆಪಿ ಸೇರಲು ನನಗೆ ಆಹ್ವಾನ ಬಂದಿತ್ತು. ಆದರೆ ನಾನು ಅದನ್ನು ತಿರಸ್ಕರಿಸಿದೆ. ನಾನು ಯಾರ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಗೆದ್ದೆನೋ ಆ ಪಕ್ಷದಲ್ಲೇ ಉಳಿಯುತ್ತೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯಸಭಾ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ ಸುಖೇಂದು ಶೇಖರ್ ರೇ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎಂದಿಗೂ ಚುನಾವಣೆಯಲ್ಲಿ ಗೆಲ್ಲದ ರಾಜ್ಯಸಭಾ ಸಂಸದ, ಅವರ ಮಾತಿಗೆ, ಅಭಿಪ್ರಾಯಕ್ಕೆ ಯಾವ ಮೌಲ್ಯ ಇರುತ್ತೆ ಎಂದು ಕಿಡಿಕಾರಿದ್ದಾರೆ.
ಪಕ್ಷದ ಇಬ್ಬಾಗವಾದ್ರೆ ಪಕ್ಷದ ಚಿಹ್ನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತಿರಿಸಿರುವ ಅವರು, ಚುನಾವಣೆ ಆಯೋಗ ಚಿಹ್ನೆಯನ್ನು ನೀಡಿದೆ. ಅವರು ಶಾಸಕರಿಗೆ ಅನುಗುಣವಾಗಿ ಚಿಹ್ನೆಯನ್ನು ಬದಲಾಯಿಸುವುದಿಲ್ಲ. ಆ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದಿದ್ದಾರೆ.
ಟಿಎಂಸಿಯಲ್ಲಿ ಬಂಡಾಯ
ವಿಧಾನಸಭೆಯಲ್ಲಿ ಋತಬ್ರತ ಬ್ಯಾನರ್ಜಿ ನೇತೃತ್ವದ ಟಿಎಂಸಿ ಶಾಸಕರ ಒಂದು ದೊಡ್ಡ ಗುಂಪು ಬಂಡಾಯ ಎದ್ದ ಬಳಿಕ, ಸಂಸತ್ನಲ್ಲೂ ಎನ್ಡಿಎಗೆ ಬೆಂಬಲ ನೀಡಲು ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ 20 ಸಂಸದರ ಗುಂಪು ಸ್ಪೀಕರ್ಗೆ ಪತ್ರ ಬರೆದಿದೆ.
ಏತನ್ಮಧ್ಯೆ, ಟಿಎಂಸಿಯ ಸ್ಥಾಪಕ ಸದಸ್ಯರು ಮತ್ತು ಸಂಸತ್ತಿನಲ್ಲಿ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಸುಖೇಂದು ಶೇಖರ್ ರೇ ಇಂದು ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜ್ಯಸಭಾ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಇನ್ನೂ ಸಂಸದರ ಎನ್ಡಿಎಗೆ ಬೆಂಬಲ ನೀಡುವ ನಿರ್ಧಾರ ಮತ್ತು ಸುಖೇಂದು ಶೇಖರ್ ರೇ ಅವರ ರಾಜೀನಾಮೆ ಬಗ್ಗೆ ಟಿಎಂಸಿ ನಾಯಕತ್ವವು ಇನ್ನೂ ಪ್ರತಿಕ್ರಿಯಿಸಿಲ್ಲ. ಇಂದು ಬೆಳಗ್ಗೆ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು (ಏಜೆನ್ಸೀಸ್).