ತನ್ನ ದುಬಾರಿ ಲಂಬೋರ್ಘಿನಿ ಕಾರನ್ನು ಅಚ್ಚರಿಯಿಂದ ನೋಡುತ್ತಿದ್ದ ಜಿಮ್ ಕ್ಲೀನರ್‌ಗೆ ಸರ್ಪ್ರೈಸ್​ ಕೊಟ್ಟ ಉದ್ಯಮಿ..! Lamborghini

ಹೈದರಾಬಾದ್ ಮೂಲದ ಕೈಗಾರಿಕೋದ್ಯಮಿ ಕುರಾಪತಿ ನಾಗವೆಂಕಟ ರಾಕೇಶ್ ಕುಮಾರ್ ಅವರು ಪ್ರತಿದಿನ ಜಿಮ್‌ಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ, ಅಲ್ಲಿನ ಕ್ಲೀನರ್ ಒಬ್ಬರು ತಮ್ಮ ದುಬಾರಿ ಲಂಬೋರ್ಘಿನಿ ಕಾರನ್ನು ಅತಿಯಾದ ಆಸೆಯಿಂದ ದಿಟ್ಟಿಸಿ ನೋಡುವುದನ್ನು ಗಮನಿಸಿದರು.
Lamborghini
ಲಂಬೋರ್ಘಿನಿ ಕಾರನ್ನು ಅಚ್ಚರಿಯಿಂದ ನೋಡುತ್ತಿದ್ದ ಜಿಮ್ ಕ್ಲೀನರ್‌ಗೆ ಸರ್ಪ್ರೈಸ್​ ಕೊಟ್ಟ ಉದ್ಯಮಿ..!
Published on: 

Lamborghini ​: ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ನೂರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ, ಕೆಲವೊಮ್ಮೆ ಕೆಲವು ವಿಡಿಯೋಗಳು ನಮ್ಮ ಮನಸ್ಸನ್ನು ಆಳವಾಗಿ ಸ್ಪರ್ಶಿಸುತ್ತವೆ. ಆ ಪಟ್ಟಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ. ಹೈದರಾಬಾದ್‌ನ ಉದ್ಯಮಿಯೊಬ್ಬರು ಜಿಮ್‌ನ ಕ್ಲೀನರ್ ಮೇಲೆ ತೋರಿದ ಮಾನವೀಯತೆ ಹಾಗೂ ಹೃದಯ ಶ್ರೀಮಂತಿಕೆಯು ನೆಟ್ಟಿಗರ ಮನಗೆದ್ದಿದೆ.

ಹೈದರಾಬಾದ್ ಮೂಲದ ಕೈಗಾರಿಕೋದ್ಯಮಿ ಕುರಾಪತಿ ನಾಗವೆಂಕಟ ರಾಕೇಶ್ ಕುಮಾರ್ ಅವರು ಪ್ರತಿದಿನ ಜಿಮ್‌ಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ, ಅಲ್ಲಿನ ಕ್ಲೀನರ್ ಒಬ್ಬರು ತಮ್ಮ ದುಬಾರಿ ಲಂಬೋರ್ಘಿನಿ ಕಾರನ್ನು ಅತಿಯಾದ ಆಸೆಯಿಂದ ದಿಟ್ಟಿಸಿ ನೋಡುವುದನ್ನು ಗಮನಿಸಿದರು. ಆ ಕಾರಿನ ಬಗ್ಗೆ ಅದೆಷ್ಟು ಒಲವಿತ್ತೆಂದರೆ, ಆ ಕ್ಲೀನರ್ ಒಂದು ದಿನ ಕಾರಿನ ಮುಂದೆ ನಿಂತು ಫೋಟೋಗಳನ್ನು ಕೂಡ ತೆಗೆಸಿಕೊಂಡಿದ್ದರು. ಇದನ್ನು ಗಮನಿಸಿದ ರಾಕೇಶ್ ಕುಮಾರ್, ಆ ವ್ಯಕ್ತಿಯ ಕಣ್ಣಲ್ಲಿದ್ದ ಕನಸನ್ನು ಅರ್ಥಮಾಡಿಕೊಂಡರು.

ಕ್ಲೀನರ್‌ನ ಮನಸ್ಸಿನ ಆಸೆಯನ್ನು ಅರಿತ ರಾಕೇಶ್ ಕುಮಾರ್, ತಕ್ಷಣವೇ ಯಾರಿಗೂ ನಿರೀಕ್ಷೆಯಿರದ ಕೆಲಸವೊಂದನ್ನು ಮಾಡಿದರು. ಅವರು ತಮ್ಮ ಐಷಾರಾಮಿ ಲಂಬೋರ್ಘಿನಿ ಕಾರಿನ ಕೀಲಿಗಳನ್ನು ನೇರವಾಗಿ ಆ ಕ್ಲೀನರ್ ಕೈಗೆ ಇಟ್ಟು, ಅವರನ್ನು ಕಾರಿನ ಒಳಗೆ ಚಾಲಕನ ಸೀಸನ್‌ನಲ್ಲಿ ಕೂರಿಸಿದರು. ಆ ಕಾರಿನಲ್ಲಿ ಕುಳಿತಾಗ ಆ ಕ್ಲೀನರ್ ಕಣ್ಣುಗಳಲ್ಲಿ ಮೂಡಿದ ಅತೀವ ಆನಂದ ಮತ್ತು ಸಂಭ್ರಮವು ತನಗೆ ಜೀವನದಲ್ಲಿ ಅಪಾರ ತೃಪ್ತಿಯನ್ನು ನೀಡಿತು ಎಂದು ರಾಕೇಶ್ ಕುಮಾರ್ ಹಂಚಿಕೊಂಡಿದ್ದಾರೆ.

Also Read
ತುಮಕೂರು ವಿವಿ ಜ್ಞಾನಸಿರಿ ಕ್ಯಾಂಪಸ್ ಬಳಿ ರೋಚಕ ಘಟನೆ: ನಾಯಿಗೆ ಹೆದರಿ ತೆಂಗಿನ ಮರವೇರಿ ಕುಳಿತ ಚಿರತೆ..! Leopard
Lamborghini

ಈ ಹೃದಯಸ್ಪರ್ಶಿ ಘಟನೆಯ ಹಿಂದೆ ರಾಕೇಶ್ ಕುಮಾರ್ ಅವರ ಕಷ್ಟದ ದಿನಗಳ ಹಿನ್ನೆಲೆಯೂ ಇದೆ. ತಾನು ಕೂಡ ಹಿಂದೊಮ್ಮೆ ಕೇವಲ 800 ರೂ. ಅಲ್ಪ ಸಂಬಳಕ್ಕೆ ಸೇಲ್ಸ್‌ಮನ್ ಆಗಿ ಕೆಲಸ ಮಾಡುತ್ತಿದ್ದಾಗ ಸೂಪರ್‌ಕಾರ್ ಮಾಲೀಕರನ್ನು ಬಹಳ ಇಷ್ಟಪಡುತ್ತಿದ್ದುದಾಗಿ ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ನೆನಪಿಸಿಕೊಂಡಿದ್ದಾರೆ. ಆ ಕಾಲದಲ್ಲಿ ದೊಡ್ಡ ಕಾರುಗಳ ಮಾಲೀಕರು ತಮ್ಮನ್ನು ಕಡೆಗಣಿಸುತ್ತಿದ್ದರು ಎಂಬುದನ್ನು ಸ್ಮರಿಸಿಕೊಂಡ ಅವರು, ಭವಿಷ್ಯದಲ್ಲಿ ತಾನು ಎತ್ತರಕ್ಕೆ ಬೆಳೆದಾಗ ಯಾರೊಬ್ಬರನ್ನೂ ಹಾಗೆ ಕಡೆಗಣಿಸುವುದಿಲ್ಲ ಎಂದು ಅಂದೇ ಶಪಥ ಮಾಡಿದ್ದಾಗಿ ತಿಳಿಸಿದ್ದಾರೆ.

ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತಾನು ಹಿಂದೆ ಬಂದ ದಾರಿಯನ್ನು ಹಾಗೂ ಕಷ್ಟದ ದಿನಗಳನ್ನು ಮರೆಯಬಾರದು ಎಂಬ ಸಂದೇಶವನ್ನು ಈ ಘಟನೆಯ ಮೂಲಕ ರಾಕೇಶ್​ ಸಾರಿದ್ದಾರೆ. ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ 2.7 ಕೋಟಿಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಷ್ಟೇ ಹಣ ಗಳಿಸಿದರೂ, ಎಷ್ಟೇ ಎತ್ತರಕ್ಕೆ ಏರಿದರೂ ಯಾವುದೇ ಗರ್ವವಿಲ್ಲದೆ ಮಾನವೀಯತೆ ಮೆರೆದಿರುವ ಉದ್ಯಮಿ ರಾಕೇಶ್ ಕುಮಾರ್ ಅವರ ಗುಣವನ್ನು ನೆಟ್ಟಿಗರು ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net