ಅಧಿಕಾರಿಗಳ ಪ್ರಕಾರ, ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ ದೂರುಗಳಿಗಾಗಿ ಕಾಯುವ ಬದಲು, ಒಬ್ಬ ಸಾಮಾನ್ಯ ಮಹಿಳೆ ಸಾರ್ವಜನಿಕ ಸ್ಥಳದಲ್ಲಿ ಎದುರಿಸುವ ಕಿರುಕುಳವನ್ನು ನೇರವಾಗಿ ಪರೀಕ್ಷಿಸಲು ರಹಸ್ಯ ಕಾರ್ಯಾಚರಣೆಯನ್ನು ನಡೆಸಲಾಯಿತು. ಆದಾಗ್ಯೂ, ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಸುಮಾರು 40 ಪುರುಷರು ಒಬ್ಬಂಟಿಯಾಗಿದ್ದ ಅಧಿಕಾರಿಯನ್ನು ಕಿರುಕುಳ ನೀಡುವ ಉದ್ದೇಶದಿಂದ ಅನುಮಾನಾಸ್ಪದವಾಗಿ ಸಂಪರ್ಕಿಸಿದ್ದು, ಅದರಲ್ಲಿ ಹಲವರು ಕುಡಿದಿರುವಂತೆ ಕಂಡುಬಂದರೆ, ಇನ್ನೂ ಕೆಲವರು ಗಾಂಜಾ ಸೇವನೆಯ ಪ್ರಭಾವದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.