ಮದುವೆ ಬೇಡ ಎಂದವಳಿಗೆ HIV ರಕ್ತ ಚುಚ್ಚಿದ ಪಾಪಿ; ಮನನೊಂದು ಯುವತಿ ಆತ್ಮಹತ್ಯೆ..Hyderabad

ಮೃತ ಯುವತಿ, ಆರೋಪಿ
ಮೃತ ಯುವತಿ, ಆರೋಪಿ
Published on

ಪ್ರಮುಖ ಮುಖ್ಯಾಂಶಗಳು

  • ಎಚ್‌ಐವಿ ಪೀಡಿತನೆಂದು ತಿಳಿದು ಮದುವೆ ರದ್ದುಗೊಳಿಸಿದ್ದ 24 ಯುವತಿ ವರ್ಷದ ಯುವತಿ
  • ಮದುವೆ ನಿರಾಕರಿಸಿದ್ದಕ್ಕೆ ಯುವತಿಗೆ ಎಚ್‌ಐವಿ ರಕ್ತ ಚುಚ್ಚಿದ್ದ ಆರೋಪಿ ಮನೋಹರ್
  • ಸಾಮಾಜಿಕ ಕಳಂಕ ಮತ್ತು ಮಾನಸಿಕ ಒತ್ತಡಕ್ಕೆ ಮಣಿದು 24 ವರ್ಷದ ಯುವತಿ ಆತ್ಮಹತ್ಯೆ.
ಹೈದರಾಬಾದ್: ಎಚ್​ಐವಿ ಇದೆ ಮದುವೆಯಾಗೋಕೆ ಇಷ್ಟವಿಲ್ಲ ಎಂದ ಯುವತಿಯ ಮೇಲೆ ಸಿಟ್ಟಾದ ಯುವಕನೊಬ್ಬ ಆಕೆಗೆ ಬಲವಂತವಾಗಿ ಎಚ್‌ಐವಿ ಪೀಡಿತ ರಕ್ತವನ್ನು ಇಂಜೆಕ್ಟ್ ಮಾಡಿದ ಪರಿಣಾಮ, ಮನನೊಂದ 24 ವರ್ಷದ ಯುವತಿಯೊಬ್ಬಳು ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಆತ ಎಚ್​ಐವಿ ಪೀಡಿತನೆಂದು ತಿಳಿದಿದ್ದ ಕಾರಣ 24 ವರ್ಷದ ಯುವತಿ ಮದುವೆ ರಿಜೆಕ್ಟ್​ ಮಾಡಿದ್ದಳು, ಇದರಿಂದ ಕೆರಳಿದ್ದ ಆತ ಮಾರ್ಚ್​ 11ರಂದು ಆಕೆಗೆ ಬಲವಂತವಾಗಿ ಆಕೆಗೆ ಎಚ್​ಐವಿ ಪೀಡಿತ ರಕ್ತ ಇಂಜೆಕ್ಟ್ ಮಾಡಿದ್ದಾನೆ. ಆದರೆ, ಇದರಿಂದ ಮನನೊಂದ ಆಕೆ ಶುಕ್ರವಾರ ಡೆತ್​ ನೋಟ್​ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

ಏನಿದು ಘಟನೆ?

ಆರೋಪಿ ಮನೋಹರ್ ಮತ್ತು ಸಂತ್ರಸ್ತ ಯುವತಿ ಪರಸ್ಪರ ಸಂಬಂಧಿಕರು. ಇವರಿಬ್ಬರಿಗೂ ಮದುವೆ ಮಾಡಿಸಬೇಕು ಎಂದು ಪೋಷಕರು ನಿರ್ಧರಿಸಿದ್ದರು. ಆದರೆ, ಆರೋಪಿಯ ಪೋಷಕರು ಎಚ್‌ಐವಿ ಪೀಡಿತರಾಗಿದ್ದ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಯುವತಿಯ ಪೋಷಕರು, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮನೋಹರ್‌ನನ್ನು ಪರೀಕ್ಷೆಗೆ ಒಳಪಡಿಸಿದ್ದರು.

ಆರೋಪಿಗೆ ಎಚ್​ಐವಿ ಇತ್ತು

ಪರೀಕ್ಷೆಯಲ್ಲಿ ಮನೋಹರ್ ಕೂಡ ಎಚ್‌ಐವಿ ಪಾಸಿಟಿವ್ ಎಂಬುದು ದೃಢಪಟ್ಟಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಯುವತಿ ಮದುವೆ ಬೇಡ ಎಂದು ನಿರಾಕರಿಸಿದ್ದಳು. ಇದರಿಂದ ಕೆರಳಿದ ಮನೋಹರ್, ಮಾರ್ಚ್ 11 ರಂದು ಯುವತಿಯ ಮನೆಗೆ ನುಗ್ಗಿ ತನ್ನ ದೇಹದಲ್ಲಿದ್ದ ಎಚ್‌ಐವಿ ಪೀಡಿತ ರಕ್ತವನ್ನು ಆಕೆಗೆ ಬಲವಂತವಾಗಿ ಇಂಜೆಕ್ಷನ್ ಮೂಲಕ ಚುಚ್ಚಿದ್ದ.
ಈ ಘಟನೆಯ ಬಗ್ಗೆ ಆಕೆ ಕುಟುಂಬಕ್ಕೆ ತಿಳಿಸಿರಲಿಲ್ಲ. ಮರುದಿನ ಆಕೆಗೆ ದೇಹದಲ್ಲಿ ನೋವು ಮತ್ತು ತೀವ್ರ ಜ್ವರ ಕಾಣಿಸಿಕೊಂಡಿತು, ಕುಟುಂಬ ಸದಸ್ಯರು ಆಕೆಯನ್ನು ವೈದ್ಯರ ಬಳಿಗೆ ಕರೆದೊಯ್ದರು. ಆಗ ಆಕೆಯ ಮುಂಗೈಯಲ್ಲಿ ಕಪ್ಪಾಗಿ ಹೆಪ್ಪುಗಟ್ಟಿರುವುದನ್ನು ಗಮನಿಸಿದ ವೈದ್ಯರು, ಏನಾಗಿತ್ತು ಎಂದ ಅದರ ಬಗ್ಗೆ ಪ್ರಶ್ನಿಸಿದರು. ಆಕೆಯ ಕುಟುಂಬಸ್ಥರು ಸಹ ಅಲ್ಲೇ ಇದ್ದರು. ಆಗ ಆಕೆ ನಡೆದ ಸಂಗತಿ ಬಿಚ್ಚಿಟ್ಟಿದ್ದಳು. ಈ ಘಟನೆಯ ನಂತರ ಆತನನ್ನು ಬಂಧಿಸಲಾಗಿತ್ತು.

ಆತ್ಮಹತ್ಯೆಗೆ ಶರಣಾದ ಯುವತಿ

ಘಟನೆ ನಡೆದು ಸುಮಾರು ಒಂದು ತಿಂಗಳ ನಂತರ, ಏಪ್ರಿಲ್​ 10, ಶುಕ್ರವಾರದಂದು ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣವೇ ಕುಟುಂಬ ಸದಸ್ಯರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಸಹ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಮಾನಸಿಕ ಒತ್ತಡವೇ ಕಾರಣ

ಪೊಲೀಸರ ಪ್ರಕಾರ, ಈ ಘಟನೆಯ ನಂತರ ಯುವತಿಯು ತೀವ್ರತರವಾದ ಮಾನಸಿಕ ಒತ್ತಡ ಮತ್ತು ಆತಂಕಕ್ಕೆ ಒಳಗಾಗಿದ್ದಳು. ಎಚ್‌ಐವಿ ಸೋಂಕಿನ ಭೀತಿ, ಸಾಮಾಜಿಕ ಕಳಂಕ ಮತ್ತು ಅನುಭವಿಸಿದ ದೈಹಿಕ ಹಾಗೂ ಮಾನಸಿಕ ಆಘಾತದಿಂದ ಆಕೆ ಹೊರಬರಲು ಸಾಧ್ಯವಾಗಲಿಲ್ಲ ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net