Amazon To Uber: ಇಂದಿನ ಇಂಟರ್ನೆಟ್ ಜಗತ್ತಿನಲ್ಲಿ ಪ್ರತಿಷ್ಠಿತ ಮಲ್ಟಿನ್ಯಾಷನಲ್ ಕಂಪನಿ ಹಾಗೂ ಐಟಿ ಉದ್ಯೋಗ ಎಂದರೆ ಲಕ್ಷಾಂತರ ಯುವಕರ ಕನಸು. ಕೈತುಂಬಾ ಸಂಬಳ, ವೀಕೆಂಡ್ ಲೈಫ್, ಸಮಾಜದಲ್ಲಿ ಗೌರವ ತಂದುಕೊಡುವ ಇಂತಹ ಕಾರ್ಪೊರೇಟ್ ವೃತ್ತಿಜೀವನವನ್ನು ಪಡೆಯಲು ಯುವಜನತೆ ಹಗಲಿರುಳು ಶ್ರಮಿಸುತ್ತಾರೆ. ಆದರೆ, ಹೈದರಾಬಾದ್ ಮೂಲದ ಕುಮಾರ್ ಎಂಬ ಯುವಕ ಇವೆಲ್ಲವನ್ನೂ ತೊರೆದು, ತನಗೆ ನಿಜವಾದ ಸಂತೋಷ ಮತ್ತು ನೆಮ್ಮದಿ ನೀಡುವ ಉಬರ್ ಚಾಲಕನ ವೃತ್ತಿಯನ್ನು ಆಯ್ದುಕೊಂಡು ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದ್ದಾನೆ.