ಪೊಲೀಸರ ಒನ್ ಎಸ್‌ಎಂಎಸ್... ಕಳ್ಳನ ಆಟ ಫಿನಿಶ್: ಕದ್ದ ಬೈಕ್‌ನ ಕಹಾನಿಯಲ್ಲಿ ಬಿಗ್ ಟ್ವಿಸ್ಟ್! Bike Theft

 Bike Theft (ಚಿತ್ರ X)
Bike Theft (ಚಿತ್ರ X)
Published on
ಹೈದರಾಬಾದ್: ವಾಹನಗಳು ಕಳ್ಳತನವಾದರೆ (BikeTheft) ಅದು ಮತ್ತೆ ಸಿಗುತ್ತದೆ ಎಂಬುದಕ್ಕೆ ಭರವಸೆಗಳು ಬಹಳ ಕಡಿಮೆ ಇರುತ್ತದೆ. ಆದರೆ, ಹೈದರಾಬಾದ್​ನ ಫೈಸಲ್​ ರೆಹಮಾನ್ ಎಂಬುವವರಿಗೆ ತಮ್ಮ ಮೋಟಾರ್​ ಸೈಕಲ್​ ಸಿಕ್ಕಿದ್ದು ಮಾತ್ರ ಅತ್ಯಂತ ವಿಚಿತ್ರ ರೀತಿಯಲ್ಲಿ. ಅದೇಂಗಂತೀರಾ? ಈ ಮಾಹಿತಿ ನೀಡಿದ್ದು, ಕಳ್ಳನಲ್ಲ. ಅಥವಾ ಪೊಲೀಸರಲ್ಲ ಬದಲಾಗಿ ಕಳ್ಳ ಮಾಡಿದ ಸಂಚಾರ ಉಲ್ಲಂಘನೆ ಮತ್ತು ಬಂದ ಟ್ರಾಫಿಕ್ ದಂಡದ ಮೆಸೇಜ್!

ಘಟನೆ ಏನು?

ಸುಮಾರು ಮೂರು ತಿಂಗಳ ಹಿಂದೆ ರೆಹಮಾನ್​ ತನ್ನ ಬೈಕ್​ ಕಾಣೆಯಾಗಿದೆ ಎಂದು ಹಬೀಬ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಆದಾಗ್ಯೂ, ದಿನಗಳು ಕಳೆದಂತೆ ಬೈಕ್ ಸಿಗುವ ಭರವಸೆಯನ್ನು ಕೈಬಿಟ್ಟಿದ್ದ ಫೈಸಲ್, ಬಹುಶಃ ಕಳ್ಳರು ಅದನ್ನು ಬಿಡಿಭಾಗಗಳಾಗಿ ಮಾರಾಟ ಮಾಡಿರಬಹುದು ಅಥವಾ ನಗರದ ಗಡಿ ದಾಟಿಸಿರಬಹುದು ಎಂದು ಭಾವಿಸಿದ್ದರು.
ಮೂರು ತಿಂಗಳು ಕಳೆದ ನಂತರ ಒಂದು ದಿನ ಇದ್ದಕ್ಕಿಂದತೆಯೇ ಅವರ ಫೋನ್​ಗೆ ಒಂದು ಎಸ್‌ಎಂಎಸ್ (SMS) ಬಂದಿತು. ಅದು ಹೈದರಾಬಾದ್ ಟ್ರಾಫಿಕ್ ಪೊಲೀಸರಿಂದ ಬಂದಿದ್ದ 'ಇ-ಚಲನ್' (e-Challan) ಆಗಿತ್ತು. ಅದರಲ್ಲಿ ಕದ್ದ ಬೈಕ್​ ಸಂಖ್ಯೆಯನ್ನು ಉಲ್ಲೇಖಿಸಿ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿತ್ತು. ಈ ಘಟನೆ ನಂತರ ಫೈಸಲ್​ ಅವರ ಬೈಕ್​ ಇನ್ನೂ ರಸ್ತೆಯಲ್ಲಿದೆ ಎಂಬುದನ್ನು ಅರಿತುಕೊಂಡರು.

ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳನ ಸವಾರಿ

ರೆಹಮಾನ್ ತಕ್ಷಣವೇ ಈ ಚಿತ್ರವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದು, ಹೈದರಾಬಾದ್ ಸಂಚಾರ ಪೊಲೀಸರು ಮತ್ತು ನಗರ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಕಳ್ಳನನ್ನು ಬಂಧಿಸಲು ಒತ್ತಾಯ ಹೇರಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ರೆಹಮಾನ್​ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅನೇಕರು ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ, ಕೆಲವು ಬಳಕೆದಾರರು ತ್ವರಿತ ಪೊಲೀಸ್​ ಕ್ರಮವನ್ನು ಕೋರಿದರೆ, ಇತರರು ಕದ್ದ ವಾಹನಗಳನ್ನು ವರದಿ ಮಾಡಿದ ನಂತರ ವಿಳಂಬ, ದುರ್ಬಲ ಅನುಸರಣೆ ಅಥವಾ ಕಾರ್ಯವಿಧಾನದ ಅಡೆತಡೆಗಳನ್ನು ಆರೋಪಿಸಿ ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net