Restaurant VS Swiggy; 230 ರೂ. ಊಟಕ್ಕೆ ಆನ್‌ಲೈನ್‌ನಲ್ಲಿ 436 ರೂ. ಬಿಲ್, ದುಬಾರಿ ಖರ್ಚಿನ ಗುಟ್ಟು ಬಿಚ್ಚಿಟ್ಟ ನೆಟ್ಟಿಗ

Hyderabad man finds Swiggy food delivery price difference
Hyderabad man finds Swiggy food delivery price difference
Published on: 

ಪ್ರಮುಖ ಮುಖ್ಯಾಂಶಗಳು

  • ರೆಸ್ಟೋರೆಂಟ್ ಬಿಲ್ ಹಾಗೂ ಸ್ವಿಗ್ಗಿ ಆ್ಯಪ್ ಬೆಲೆಗಳ ನಡುವಿನ ವ್ಯತ್ಯಾಸ ವೈರಲ್.
  • ಆನ್‌ಲೈನ್ ಆರ್ಡರ್‌ಗಳ ಬೆಲೆ ಹೆಚ್ಚಳದ ಬಗ್ಗೆ ನೆಟ್ಟಿಗರು ಹೇಳಿದ್ದೇನು?.
  • ರೆಸ್ಟೋರೆಂಟ್‌ನಲ್ಲಿ ಜಿಎಸ್‌ಟಿ ಸೇರಿ ಒಟ್ಟು 230 ರೂ. ಇದ್ದ ಆಹಾರದ ಬಿಲ್, ಯಾವುದೇ ಕೂಪನ್ ಇಲ್ಲದೆ ಸ್ವಿಗ್ಗಿಯಲ್ಲಿ 436 ರೂ. ತೋರಿಸಿದೆ.
Hyderabad man finds Swiggy food delivery price difference: ಆನ್​​ಲೈನ್​​ನಲ್ಲಿ ಫುಡ್ ಆರ್ಡರ್​ ಮಾಡುವುದು ಹಾಗೂ ಹೋಟೆಲ್​ನಲ್ಲಿ ಊಟ ಖರೀದಿ ಮಾಡುವುದನ್ನು ಸಮತೋಲಿಸಿ ನೋಡಿದಾಗ ಯಾವುದು ಬೆಸ್ಟ್​ ಎನ್ನುವ ವಿಚಾರವನ್ನು ಸದ್ಯ ಗ್ರಾಹಕರು  ಬೆಳಕಿಗೆ ತರುತ್ತಿದ್ದಾರೆ. ಅದರಂತೆ,  ಹೈದರಾಬಾದ್‌ನಲ್ಲಿ ವ್ಯಕ್ತಿಯೊಬ್ಬರು ರೆಸ್ಟೋರೆಂಟ್‌ನಲ್ಲಿ ತಿಂದ ಊಟದ ಬಿಲ್ ಮತ್ತು ಅದೇ ಆಹಾರವನ್ನು ಸ್ವಿಗ್ಗಿಯಲ್ಲಿ ಆರ್ಡರ್​​​​ ಮಾಡಲು ನೋಡಿದಾಗ ಅದರಲ್ಲಿ ಕಂಡುಬಂದ ವ್ಯತ್ಯಾಸವನ್ನು ಬೆಳಕಿಗೆ ತಂದಿದ್ದಾರೆ.
ಎಕ್ಸ್​ ಬಳಕೆದಾರರಾದ @idlebrainjeevi ಎಂಬುವವರು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಪ್ರಸಿದ್ಧ 'ಪಂಚಕಟ್ಟು ದೋಸೆ' ರೆಸ್ಟೋರೆಂಟ್‌ನ ಬಿಲ್ ವಿವರಗಳನ್ನು ಹಂಚಿಕೊಂಡಿದ್ದಾರೆ.  ಸ್ವಿಗ್ಗಿ ಹಾಗೂ ಜೊಮ್ಯಾಟೋ ಸೇರಿದಂತೆ ಇನ್ನಿತರ ಅಪ್ಲಿಕೇಶನ್​ಗಳು ಹೇಗೆ ದುಬಾರಿ ಹಣ  ಪೀಕುತ್ತವೆ ಎನ್ನುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಹಣ ಪೀಕುವ ಅಪ್ಲಿಕೇಶನ್​ಗಳು

 ರೆಸ್ಟೋರೆಂಟ್ ಬಿಲ್ ಪ್ರಕಾರ, ಒಂದು ತುಪ್ಪದ ಈರುಳ್ಳಿ ದೋಸೆಗೆ 104 ರೂ., ತುಪ್ಪದ ಪೊಂಗಲ್‌ಗೆ 85 ರೂ. ಮತ್ತು ಫಿಲ್ಟರ್ ಕಾಫಿಗೆ 28 ರೂ. ವಿಧಿಸಲಾಗಿದೆ. ಜಿಎಸ್‌ಟಿ ಸೇರಿ ಈ ಎಲ್ಲಾ ಪದಾರ್ಥಗಳ ಒಟ್ಟು ಮೊತ್ತ 230 ರೂ. ಆಗಿತ್ತು.  ಆದರೆ ಇದೇ ಆಹಾರವನ್ನು ಸ್ವಿಗ್ಗಿ ಆ್ಯಪ್‌ನಲ್ಲಿ ನೋಡಿದಾಗ ಬೆಲೆ ಸಂಪೂರ್ಣ ಭಿನ್ನವಾಗಿತ್ತು. ಅಲ್ಲಿ ಈರುಳ್ಳಿ ದೋಸೆ ಬೆಲೆ 149 ರೂ., ಪೊಂಗಲ್ ಬೆಲೆ 115 ರೂ. ಹಾಗೂ ವಿಶೇಷ ಫಿಲ್ಟರ್ ಕಾಫಿ ಬೆಲೆ 120 ರೂ. ಇತ್ತು. ಯಾವುದೇ ರಿಯಾಯಿತಿ ಅಥವಾ ಕೂಪನ್‌ಗಳನ್ನು ಅನ್ವಯಿಸುವ ಮುನ್ನವೇ ಒಟ್ಟು ಮೊತ್ತ 436 ರೂ. ತಲುಪಿತ್ತು. ರೆಸ್ಟೋರೆಂಟ್ ಬಿಲ್ ಹಾಗೂ ಸ್ವಿಗ್ಗಿ ಬಿಲ್ ನಡುವೆ ಬರೋಬ್ಬರಿ 206 ರೂ. ವ್ಯತ್ಯಾಸವಿತ್ತು.  

ನೆಟ್ಟಿಗರು ಏನಂದ್ರು?

ಆನ್​ಲೈನ್​ ಫುಡ್​ ಡೆಲಿವರಿ ಅಪ್ಲಿಕೇಶನ್​ಗಳು ಮನೆ ಬಾಗಿಲಿಗೆ ಆಹಾರ ತಂದು ಕೊಡುತ್ತಾರೆ ಎಂದು ಇಷ್ಟೊಂದು ಹಣ ವಿಧಿಸೋದು ಸರಿಯಲ್ಲ. ಮನೆಗೆ ಡೆಲಿವರಿ ಆಗುವ ಕಾರಣ, ಮನೆ ಬಾಗಿಲಿಗೆ ತಲುಪಿಸುವ ಸೌಕರ್ಯ ಮತ್ತು ಸೇವಾ ಶುಲ್ಕ ಇಷ್ಟಿರಬಹುದು ಎಂದು ಬರೆದುಕೊಂಡಿದ್ದಾರೆ.
ಇನ್ನು ಕೆಲ ನೆಟ್ಟಿಗರು ಹತ್ತಿರದ ರೆಸ್ಟೋರೆಂಟ್‌ಗೆ ನೇರವಾಗಿ ಹೋಗಿ ತಿನ್ನುವುದು ಮತ್ತು ಪ್ರಯಾಣದ ಖರ್ಚು, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಿಂತ ಕಡಿಮೆ ವೆಚ್ಚವಾಗುತ್ತದೆ ಎಂದು ಸಲಹೆ ಕೊಟ್ಟಿದ್ದಾರೆ.
ಮುತ್ತುಕುಮಾರನ್ ಎಂಬುವವರು ಟ್ವೀಟ್ ಮಾಡಿದ್ದು, ಇದು ಸಾಮಾನ್ಯ, ನಾನು ಸುಮಾರು 5 ವರ್ಷಗಳ ಹಿಂದೆಯೇ ಗಮನಿಸಿದ್ದೇನೆ, ಗುಣಮಟ್ಟವೂ ಕಡಿಮೆ.. ಬೇರೆ ಆಯ್ಕೆಯಿಲ್ಲ ಏನು ಮಾಡೋದು ಎಂದಿದ್ದಾರೆ.

ಕ್ಯಾಶ್​​, ಆನ್​ಲೈನ್ ಪಾವತಿ

ಆನ್​ಲೈನ್​ ಫುಡ್​ ಆರ್ಡರ್​ ಮಾತ್ರವಲ್ಲ. ಆನ್​ಲೈನ್​ ಪಾವತಿ ಮತ್ತು ನಗದು ಮೂಲಕ ನಾವು ಕೊಂಡುಕೊಳ್ಳುವ ವಸ್ತುಗಳಿಗೆ ಹಣ ಪಾವತಿ ಮಾಡುವ ವಿಚಾರಕ್ಕೆ ಯಾವುದು ಬೆಸ್ಟ್​ ಎನ್ನುವ ವಿಚಾರವನ್ನು ನೋಡಿದಾಗ ಹಲವರು ನಗದು ಪಾವತಿಯೇ ಉತ್ತಮ ಎನ್ನುತ್ತಿದ್ದಾರೆ. ಏಕೆಂದರೆ, ಅನಗತ್ಯವಾಗಿ ಖರೀದಿ ಮಾಡುವ ವಿಧಾನಕ್ಕೆ ಕಡಿವಾಣ ಬೀಳುತ್ತದೆ ಎನ್ನುವುದನ್ನು ಬೆಳಕಿಗೆ ತಂದಿದ್ದಾರೆ, (ಏಜೆನ್ಸೀಸ್).