ವರದಿಗಳ ಪ್ರಕಾರ, ಹೈದರಾಬಾದ್‌ನ ವೇವ್‌ರಾಕ್ ಮತ್ತು ಬಚುಪಲ್ಲಿ ನಡುವಿನ ರಸ್ತೆಯಲ್ಲಿ ಈ ಘಟನೆ ನಡೆದಿದೆ. ವೀಡಿಯೊದಲ್ಲಿ, ಕೆಎಸ್ಆರ್ಟಿಸಿ ಬಸ್ ರಸ್ತೆಯ ತಪ್ಪು ಬದಿಯಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಈ ವೇಳೆ ತನ್ನ ಸರಿಯಾದ ಲೇನ್‌ನಲ್ಲಿ ಮೋಟಾರ್‌ಸೈಕಲ್‌ನಲ್ಲಿ ಬರುತ್ತಿದ್ದ ಸವಾರನೊಬ್ಬ, ಎದುರುಗಡೆ ತಪ್ಪು ಬದಿಯಲ್ಲಿ ಬರುತ್ತಿದ್ದ ಬಸ್ ಅನ್ನು ಕಂಡು ದೃತಿಗೆಡಲಿಲ್ಲ. ಆತ ತನ್ನ ಬೈಕ್ ಅನ್ನು ಬದಿಗೆ ಸರಿಸುವ ಬದಲಿಗೆ, ನೇರವಾಗಿ ಬಸ್‌ನ ಮುಂಭಾಗದಲ್ಲೇ ತಂದು ನಿಲ್ಲಿಸಿದನು. ಬಸ್ ಚಾಲಕ ಎಷ್ಟೇ ಹಾರ್ನ್ ಮಾಡಿದರೂ, ಸವಾರ ಮಾತ್ರ ಅಲ್ಲಿಂದ ಒಂದು ಇಂಚೂ ಕದಲದೆ ಬಸ್‌ಗೆ ದಾರಿ ಬಿಡಲು ನಿರಾಕರಿಸಿದ್ದರಿಂದ ಸ್ವಲ್ಪ ಸಮಯ ಘರ್ಷಣೆ ಹಾಗೆಯೇ ಮುಂದುವರೆಯಿತು.