ಪತಿ-ಪತ್ನಿ ಕಲಹ: ಹೆಂಡತಿಯ ಮೂಗು-ಗಲ್ಲ ಕಚ್ಚಿ ಪರಾರಿಯಾದ ಗಂಡ; ಪೊಲೀಸರಿಂದ ಮುಂದುವರಿದ ಹುಡುಕಾಟ! Husband Wife Conflict

ಪತ್ನಿಯ ಮೂಗು ಮತ್ತು ಗಲ್ಲವನ್ನು ಕಚ್ಚಿ ಪರಾರಿಯಾದ ಪತಿರಾಯ
ಪತ್ನಿಯ ಮೂಗು ಮತ್ತು ಗಲ್ಲವನ್ನು ಕಚ್ಚಿ ಪರಾರಿಯಾದ ಪತಿರಾಯ
Published on

ಪ್ರಮುಖ ಮುಖ್ಯಾಂಶಗಳು

  • ಮನೆಯಲ್ಲಿ ಗಂಡ- ಹೆಂಡತಿ ಜಗಳ
  • ಪತ್ನಿಯ ಮೂಗು ಮತ್ತು ಗಲ್ಲವನ್ನು ಕಚ್ಚಿ ಪರಾರಿಯಾದ ಪತಿರಾಯ
  • ಪೋಲಿಸರಿಂದ ಮುಂದುವರಿದ ಶೋಧಕಾರ್ಯ
ಉತ್ತರ ಪ್ರದೇಶ: ಗಂಡ- ಹೆಂಡರ ಜಗಳ (Husband Wife Conflict) ಉಂಡು ಮಲಗುವ ತನಕ ಎಂಬ ಮಾತನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಹೆಂಡಿಯೊಂದಿಗೆ ಜಗಳವಾಡುವಾಗ ಆಕೆಯ ಮೂಗು ಮತ್ತು ಗಲ್ಲವನ್ನು ಕಚ್ಚಿದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

ಏನಿದು ಘಟನೆ?

ಈ ಘಟನೆಯು ಉತ್ತರ ಪ್ರದೇಶದ ಹರಿಪುರದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಫನಾ ಎಂಬಾಕೆ ಫೂಲ್​ ಎಂಬಾತನನ್ನು ಹಲವು ವರ್ಷಗಳ ಹಿಂದೆ ವರಿಸಿದ್ದು, ಫನಾನ ತಮ್ಮನ ಪ್ರಕಾರ ಮದುವೆಯಾದ ದಿನದಿಂದ ಇಬ್ಬರಲ್ಲಿ ಹೊಂದಾಣಿಕೆಯೆ ಇರಲಿಲ್ಲ.
ಪ್ರತಿದಿನ ಭಾವ ನನ್ನ ಅಕ್ಕನನ್ನು ಹೊಡೆಯುತ್ತಿದ್ದ ಗುರುವಾರ (ಏ.2) ದಂದು ಫೂಲ್​ ಮತ್ತು ಫನಾ ನಡುವೆ ಮತ್ತೆ ಜಗಳ ಪ್ರಾರಂಭವಾಗಿದ್ದು, ಸಿಟ್ಟಿಗೆದ್ದ ಫೂಲ್​ ತನ್ನ ಹೆಂಡತಿಯ ಗಲ್ಲ ಮತ್ತು ಮೂಗನ್ನು ಗಟ್ಟಿಯಾಗಿ ಕಚ್ಚಿದ್ದಾನೆ.
ತೀವ್ರ ರಕ್ತಸ್ರಾವ ಪ್ರಾರಂಭವಾಗಿದ್ದೆ, ಮನೆಯಿಂದ ಓಡಿ ಹೋಗಿದ್ದಾನೆ. ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಫನಾಳನ್ನು ನೆರೆ-ಹೊರೆಯವರು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಫನಾಳಿಗೆ ಚಿಕಿತ್ಸೆ ನೀಡಿದ ವೈದ್ಯರು
ಗಾಯಕ್ಕೆ ಸ್ಟಿಚ್​ ಹಾಕಿರುವುದಾಗಿ ತಿಳಿಸಿದ್ದಾರೆ. ಆದರೆ ಫನಾಳ ಮುಖ ಸಂಪೂರ್ಣವಾಗಿ ವಿರೂಪವಾಗಿರುವ ಕಾರಣ ಪ್ಲಾಸ್ಟಿಕ್​ ಸರ್ಜರಿ ಮಾಡಬೇಕಾಗಬಹುದು ಎನ್ನುವುದು ವೈದ್ಯರ ಸಲಹೆಯಾಗಿದೆ.

ಪೊಲೀಸರಿಂದ ಪ್ರಕರಣ ದಾಖಲು

ತನ್ನ ಅಕ್ಕಳ ಮೇಲಾದ ದೌರ್ಜನ್ಯವನ್ನು ಖಂಡಿಸಿ ತಮ್ಮ ಪೊಲೀಸರ ಬಳಿ ದೂರನ್ನು ದಾಖಲಿಸಿದ್ದಾನೆ. ಕೌಟುಂಬಿಕ ಹಿಂಸೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಜಾನ್ಸಿ ಪೊಲೀಸರು, ಪರಾರಿಯಾಗಿರುವ ಫೂಲ್​ನ ಪತ್ತೆಗಾಗಿ ವಿಶೇಷ ತಂಡವೊಂದನ್ನು ರಚಿಸಿದ್ದಾರೆ. ಆದಷ್ಟು ಬೇಗ ಫೂಲ್​ನನ್ನು ಬಂಧಿಸಿ ತಕ್ಕ ಶಿಕ್ಷೆ ನೀಡುವುದಾಗಿ ಪೊಲೀಸ್​ ಮೂಲಗಳು ಮಾಹಿತಿ ನೀಡಿವೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net