ಮಾತು ಬೆಳೆದು ವಾಗ್ವಾದ ತಾರಕಕ್ಕೇರಿದಾಗ, ರಶೀದ್ ಅಲ್ಮಾರಾದಲ್ಲಿ ಬಚ್ಚಿಟ್ಟಿದ್ದ ಪಿಸ್ತೂಲನ್ನು ಹೊರತೆಗೆದಿದ್ದಾನೆ. ಪಕ್ಕದ ಕೋಣೆಯಲ್ಲಿದ್ದ ದಂಪತಿಯ 7 ವರ್ಷದ ಮಗ ಜೋರು ಧ್ವನಿ ಕೇಳಿ ಓಡಿ ಬಂದಿದ್ದಾನೆ. ಮಗನ ಕಣ್ಣೆದುರೇ ರಶೀದ್ ಮೊದಲು ಫಹೀಮ್ ತಲೆಗೆ ಗುಂಡಿಕ್ಕಿದ್ದಾನೆ, ನಂತರ ಪತ್ನಿ ಶಬ್ನಮ್ ಮೇಲೆ ಗುಂಡಿನ ಮಳೆಗರೆದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ನೋಡಿ ಬೆಚ್ಚಿಬಿದ್ದ ಮಗನಿಗೆ, "ಈಗ ಎಲ್ಲವೂ ಸರಿಯಾಗುತ್ತದೆ" ಎಂದು ಹೇಳಿ ರಶೀದ್ ಸ್ಥಳದಿಂದ ಪರಾರಿಯಾಗಿದ್ದಾನೆ.