ಅಮೆರಿಕಾದಲ್ಲಿ ಭಾರತೀಯ ಮೂಲದ ಮಾಜಿ ಗೂಗಲ್ ಕಾರ್ಯ ನಿರ್ವಾಹಕಿಯನ್ನು ಗುಂಡಿಕ್ಕಿ ಹತ್ಯೆಗೈದ ಪತಿ | shoots dead
ಶೀತಲ್ ವ್ರ್ಜೆಸಿಯನ್
Published on:
Copied
Follow Us
ವಾಷಿಂಗ್ಟನ್: ಅಮೆರಿಕದ ಜಾರ್ಜಿಯಾದ ಕಾಬ್ ಕೌಂಟಿಯಲ್ಲಿ ಗೂಗಲ್‌ನ ಮಾಜಿ ಕಾರ್ಯನಿರ್ವಾಹಕಿಯಾಗಿದ್ದ ಭಾರತೀಯ ಮೂಲದ ಶೀತಲ್ ವ್ರ್ಜೆಸಿಯನ್ ಅವರನ್ನು ಅವರ ಪತಿಯೇ ಗುಂಡಿಕ್ಕಿ ಕೊಂದಿದ್ದು(shoots dead), ಆರೋಪಿಯನ್ನು ಬಂಧಿಸಿದ್ದಾರೆ ಎಂದು ಭಾನುವಾರ(ಜು. 12) ವರದಿಯಾಗಿದೆ.
ಲಾರೆಲ್ ಕ್ರೀಕ್ ಟ್ರೈಲ್‌ನಲ್ಲಿರುವ ಕುಟುಂಬದ ನಿವಾಸದಲ್ಲಿ ಈ ಘಟನೆ ನಡೆದಿದೆ. ಆರೋಪಿ 56 ವರ್ಷದ ಕಿರ್ಕ್ ಬಿ. ವ್ರ್ಜೆಸಿಯನ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಗುಂಡಿನ ದಾಳಿ ಸಮಯದಲ್ಲಿ ಅವರ ಮಗ ಜೇಸನ್ ವ್ರ್ಜೆಸಿಯನ್ಗೂ ಗಂಭೀರ ಗಾಯಗಳಾಗಿವೆ. ಪಕ್ಕದ ಮನೆಗೆ ಓಡಿ ಹೋಗಿ ನೆರೆ ಮನೆಯವರ ಸಹಾಯ ಕೋರಿದ್ದರಿಂದ ಬದುಕುಳಿದಿದ್ದಾನೆ ಎನ್ನಲಾಗಿದೆ.
ಕಾಬ್ ಕೌಂಟಿ ಪೊಲೀಸ್ ಇಲಾಖೆಯ ಪ್ರಕಾರ, ರಾತ್ರಿ 8 ಗಂಟೆ ಸುಮಾರಿಗೆ ಸ್ಮಿರ್ನಾದಲ್ಲಿರುವ ದಂಪತಿಗಳ ಮನೆಯಲ್ಲಿ ಗುಂಡಿನ ಚಕಮಕಿ ನಡೆದಿದೆ. ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿದಾಗ 57 ವರ್ಷದ ಶೀತಲ್ ವ್ರ್ಜೆಸಿಯನ್ ಮನೆಯೊಳಗೆ ಗುಂಡೇಟಿನಿಂದ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಿರ್ಕ್ ವ್ರ್ಜೆಸಿಯನ್ ಅವರನ್ನು ಕಾಬ್ ಕೌಂಟಿ ವಯಸ್ಕರ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. ಪೊಲೀಸರು ಘಟನೆಗೆ ಏನು ಕಾರಣ ಎಂಬುದನ್ನು ತಿಳಿಯಲು ತನಿಖೆ ಮುಂದುವರೆಸಿದ್ದಾರೆ (ಏಜೆನ್ಸೀಸ್).