ಆಂಧ್ರಪ್ರದೇಶ: ದೇವಸ್ಥಾನ ಎಂದಮೇಲೆ ಭಕ್ತರು ಸಾಮಾನ್ಯ. ಭಕ್ತಾಧಿಗಳು ಎಂದಾಗ ದೇವರಲ್ಲಿ ಕೋರಿಕೆ, ಬೇಡಿಕೆ ಇನ್ನೂ ಸಾಮಾನ್ಯ. ಹೀಗಿರುವಾಗ, ದೇವಾಲಯಕ್ಕೆ ಬರುವ ಜನರು, ತಮ್ಮ ಕಷ್ಟಗಳನ್ನು ನಿವಾರಿಸು ಎಂದು ಕೈಲಾದಷ್ಟು ಕಾಣಿಕೆಯನ್ನು ಹುಂಡಿಗೆ ಹಾಕಿ ಹೋಗುತ್ತಾರೆ. ಇದು ನಮ್ಮ ಭಾರತೀಯ ಹಿಂದೂ ಸಂಪ್ರದಾಯಗಳಲ್ಲಿ ಒಂದು. ಕೆಲವರು ಚಿನ್ನಾಭರಣ, ಹಣವನ್ನು ಅರ್ಪಿಸಿದರೆ, ಇನ್ನೂ ಕೆಲವರು ತಮ್ಮಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಕಾಣಿಕೆಯ ರೂಪದಲ್ಲಿ ಹಾಕುತ್ತಾರೆ. ಆದ್ರೆ, ಇಲ್ಲೊಬ್ಬ ಭೂಪ ಮಾತ್ರ, ದೇವರಿಗೆ ತನ್ನ ಬೇಡಿಕೆಗಳನ್ನು ಈಡೇರಿಸಿದರೆ ಏನೋ ಕೊಡುತ್ತೇನೆ ಎಂದು ಪತ್ರದ ಮೂಲಕ ಡಿಮಾಂಡ್ ಮಾಡಿರುವ ಘಟನೆ ಹುಂಡಿಕೆಯ ಎಣಿಕೆಯ ವೇಳೆ ಬೆಳಕಿಗೆ ಬಂದಿದೆ.