ವಿದ್ಯಾರ್ಥಿಯ ಲಗೇಜ್ ಬ್ಯಾಗ್​​ನಲ್ಲಿ ಮಾನವ ಅಸ್ತಿ ಪಂಜರ; ನೋಡಿ ಅವಕ್ಕಾದ ವಿಮಾನ ನಿಲ್ದಾಣದ​ ಅಧಿಕಾರಿಗಳು | Skelten

ಅಸ್ತಿ ಪಂಜರ ಚಿತ್ರ
ಅಸ್ತಿ ಪಂಜರ ಚಿತ್ರ
Published on
ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿಯೊಬ್ಬನ ಲಗೇಜ್ ಪರಿಶೀಲನೆ ವೇಳೆ ಬ್ಯಾಗ್​ನಲ್ಲಿ ಮಾನವ ಅಸ್ತಿ ಪಂಜರ ಪತ್ತೆಯಾಗಿದ್ದು, ವಿಮಾನ ನಿಲ್ದಾಣದ ಅಧಿಕಾರಿಗಳು ಆಘಾತಕ್ಕೊಳಗಾದ ಘಟನೆ ಗುರುವಾರ(ಜ. 22) ನಡೆದಿದೆ.
ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಭದ್ರತಾ ಸಿಬ್ಬಂದಿ ಪ್ರಯಾಣಿಕರ ಲಗೇಜ್‌ಗಳನ್ನು ಪರಿಶೀಲಿಸುವಾಗ ವಿದ್ಯಾರ್ಥಿಯೊಬ್ಬರ ಬ್ಯಾಗ್​ನಲ್ಲಿ ಅಸ್ತಿ ಪಂಜರ ಪತ್ತೆಯಾಗಿದೆ. ಈ ವೇಳೆ ಏರ್​ಪೋರ್ಟ್​ನ ಭದ್ರತಾ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ದಳಕ್ಕಾಗಮಿಸಿ ಪರಿಶೀಲಿಸಿದ ಬಳಿಕ ಅದು ಒರಿಜಿನಲ್ ಅಸ್ತಿಪಂಜರ ಅಲ್ಲ, ವೈದ್ಯಕೀಯ ವಿದ್ಯಾರ್ಥಿಗಳು ಬಳಸುವ ಮಾದರಿ ಎಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ಇಂತಹ ಡೆಮೊ ಅಸ್ಥಿಪಂಜರಗಳನ್ನು ಬಳಸಲಾಗುತ್ತದೆ. ಆದರೂ ಹೆಚ್ಚಿನ ದೃಢೀಕರಣಕ್ಕಾಗಿ ಅಸ್ಥಿಪಂಜರವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net