ವದಂತಿಗಳ ಬೆನ್ನಲ್ಲೇ ಅಮೆರಿಕದ ಡಾಲರ್ ಮೌಲ್ಯ ಹೆಚ್ಚಾಗಿದ್ದು, ಇತರ ಕರೆನ್ಸಿ ಹೊಂದಿರುವವರಿಗೆ ಚಿನ್ನದ ಖರೀದಿ ದುಬಾರಿಯಾಗಿದೆ. ಆರ್ಥಿಕ ಅಸ್ಥಿರತೆ ಇದ್ದರೂ ಕೇಂದ್ರ ಬ್ಯಾಂಕ್‌ಗಳ ಕಠಿಣ ಕ್ರಮಗಳು ಹೂಡಿಕೆದಾರರನ್ನು ಚಿನ್ನದಿಂದ ದೂರ ಸರಿಯುವಂತೆ ಮಾಡಬಹುದು ಎಂಬ ಚರ್ಚೆ ಶುರುವಾಗಿದೆ. ಭಾರತೀಯ ಮಾರುಕಟ್ಟೆ ವಿಷಯಕ್ಕೆ ಬರುವುದಾರೆ ಅಂತರಾಷ್ಟ್ರೀಯ ಬೆಲೆ ಇಳಿಕೆಯ ನೇರ ಪರಿಣಾಮ ಭಾರತದ ಎಂಸಿಎಕ್ಸ್ (MCX) ಮಾರುಕಟ್ಟೆಯ ಮೇಲೂ ಉಂಟಾಗಿದ್ದು, ಸ್ಥಳೀಯವಾಗಿ ಆಭರಣ ಚಿನ್ನದ ಬೆಲೆ ಕೂಡ ಇಳಿಕೆಯ ಹಾದಿ ಹಿಡಿದಿದೆ.