ಸರಳವಾಗಿ ಹೇಳುವುದಾದರೆ, ಮಾಸ್ಕ್‌ಡ್ ಆಧಾರ್ ಎಂಬುದು ನಿಮ್ಮ ಮೂಲ ಆಧಾರ್ ಕಾರ್ಡ್‌ನ ಇನ್ನೊಂದು ರೂಪ. ಇದರಲ್ಲಿ ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆಯ ಮೊದಲ 8 ಅಂಕಿಗಳು ಅಡಗಿಸಲ್ಪಟ್ಟಿರುತ್ತವೆ (XXXX-XXXX ಎಂದು ಇರುತ್ತದೆ). ಕೇವಲ ಕೊನೆಯ 4 ಅಂಕಿಗಳು ಮಾತ್ರ ಕಾಣಿಸುತ್ತವೆ. ಉದಾಹರಣೆಗೆ, ನಿಮ್ಮ ಆಧಾರ್ ಸಂಖ್ಯೆ 1234 5678 9012 ಎಂದಿದ್ದರೆ, ಮಾಸ್ಕ್‌ಡ್ ಆವೃತ್ತಿಯಲ್ಲಿ ಅದು ‘XXXX XXXX 9012’ ಎಂದು ಕಾಣಿಸುತ್ತದೆ.