ಕ್ಯಾಥೋಲಿಕ್ ದೇಶದ ಅಧ್ಯಕ್ಷ ಸಾಯಿಬಾಬಾ ಭಕ್ತನಾದದ್ದು ಹೇಗೆ? ಮಡುರೊ ವಿಚಾರಣೆ ಬೆನ್ನಲ್ಲೇ ಬೆಳಕಿಗೆ ಬಂತು ಪುಟ್ಟಪರ್ತಿ ನಂಟು! Nicolas Maduro

ಸತ್ಯ ಸಾಯಿ ಬಾಬಾ ಜತೆ ನಿಕೋಲಸ್ ಮಡುರೊ ಕುಟುಂಬ
ಸತ್ಯ ಸಾಯಿ ಬಾಬಾ ಜತೆ ನಿಕೋಲಸ್ ಮಡುರೊ ಕುಟುಂಬ
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದ ನ್ಯಾಯಾಲಯದಲ್ಲಿ ನಾನು ಮನುಷ್ಯ ರೂಪದ ದೇವರು ಎಂದ ನಿಕೋಲಸ್ ಮಡುರೊ
  • ಭಾರತೀಯ ಆಧ್ಯಾತ್ಮಿಕ ನಾಯಕ ಶ್ರೀ ಸತ್ಯ ಸಾಯಿ ಬಾಬಾ ಅವರ ಅನುಯಾಯಿ ಆಗಿದ್ದ ನಿಕೋಲಸ್ ಮಡುರೊ
  • ಸತ್ಯ ಸಾಯಿ ಬಾಬಾ ಸತ್ತಾಗ ರಾಷ್ಟ್ರೀಯ ಶೋಕಾಚರಣೆಯ ದಿನವನ್ನು ಘೋಷಿಸಿದ್ದ ಮಡುರೊ
ಸತ್ಯಸಾಯಿಬಾಬಾ: ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಹಾಜರಾದ ವೆನೆಜುವೆಲಾದ ಪದಚ್ಯುತ ಅಧ್ಯಕ್ಷ ನಿಕೋಲಸ್ ಮಡುರೊ(Nicolas Maduro) ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೆನೆ, ನಾನು ಸ್ವತಂತ್ರನಾಗುವುದನ್ನು ನೀವು ನೋಡುತ್ತಿರಿ, ನಾನು ಮನುಷ್ಯ ರೂಪದ ದೇವರು ಎಂದು ಹೇಳಿರುವುದು ವರದಿಯಾಗಿದೆ.
ಈ ಹೇಳಿಕೆಗಳು ನಿಕೋಲಸ್ ಮಡುರೊ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವಂತೆ ಪ್ರೇರೆಪಿಸಿದೆ. ವೆನೆಜುವೆಲಾದ ಅಧ್ಯಕ್ಷರಾಗಿದ್ದ ನಿಕೋಲಸ್ ಮಡುರೊ ದಿವಂಗತ ಭಾರತೀಯ ಆಧ್ಯಾತ್ಮಿಕ ನಾಯಕ ಶ್ರೀ ಸತ್ಯ ಸಾಯಿ ಬಾಬಾ ಅವರ ಅನುಯಾಯಿ ಆಗಿದ್ದರು.
ವೆನೆಜುವೆಲಾ ಕ್ಯಾಥೋಲಿಕ್ ಬಹುಸಂಖ್ಯಾತ ದೇಶವಾಗಿದ್ದು, ನಿಕೋಲಸ್ ಮಡುರೊ ಹುಟ್ಟಿನಿಂದಲೇ ಕ್ಯಾಥೋಲಿಕ್ ಆಗಿದ್ದರು. ಆದರೂ ಅವರು, ಅವರ ಪತ್ನಿ, ಮಾಜಿ ರಾಷ್ಟ್ರೀಯ ಸಭೆಯ ಅಧ್ಯಕ್ಷೆ ಸಿಲಿಯಾ ಫ್ಲೋರ್ಸ್ ಮತ್ತು ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಸೇರಿದಂತೆ ಅವರ ರಾಜಕೀಯ ವಲಯದ ಹಲವಾರು ಹಿರಿಯ ವ್ಯಕ್ತಿಗಳೊಂದಿಗೆ ಶ್ರೀ ಸತ್ಯಸಾಯಿ ಬಾಬಾ ಅವರ ನಿಷ್ಠಾವಂತ ಅನುಯಾಯಿಗಳಾದರು.
ಕ್ಯಾರಕಾಸ್‌ನ ಮಿರಾಫ್ಲೋರ್ಸ್ ಅರಮನೆಯಲ್ಲಿರುವ ನಿಕೋಲಸ್ ಮಡುರೊ ಅವರ ಖಾಸಗಿ ಕಚೇರಿಯಲ್ಲಿ ಅಲ್ಲಿಯ ಸ್ವಾತಂತ್ರ್ಯ ವೀರರಾದ ಸೈಮನ್ ಬೊಲಿವರ್ ಮತ್ತು ಮಾಜಿ ಅಧ್ಯಕ್ಷ ಹ್ಯೂಗೋ ಚಾವೆಜ್ ಅವರ ಚಿತ್ರಗಳ ಜೊತೆಗೆ ಶ್ರೀ ಸತ್ಯಸಾಯಿ ಬಾಬಾ ಅವರ ದೊಡ್ಡ ಚೌಕಟ್ಟಿನ ಭಾವಚಿತ್ರವನ್ನು ಇಡಲಾಗಿತ್ತು.
2005 ರಲ್ಲಿ ಆಂಧ್ರಪ್ರದೇಶದಲ್ಲಿರುವ ಪ್ರಶಾಂತಿ ನಿಲಯಂ ಆಶ್ರಮಕ್ಕೆ ಭೇಟಿ ನೀಡಿದಾಗ ನಿಕೋಲಸ್ ಮಡುರೊ ಮತ್ತು ಫ್ಲೋರ್ಸ್ ಗುರುಗಳ ಮುಂದೆ ಮಂಡಿಯೂರಿ ಕುಳಿತಿರುವ ಪೋಟೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿದೆ. 2011 ರಲ್ಲಿ ಸಾಯಿಬಾಬಾ ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾದಾಗ, ವೆನೆಜುವೆಲಾದ ಸರ್ಕಾರವು ಅಧಿಕೃತ ಸಂತಾಪ ಸೂಚಕ ನಿರ್ಣಯವನ್ನು ಹೊರಡಿಸಿತು ಮತ್ತು ರಾಷ್ಟ್ರೀಯ ಶೋಕಾಚರಣೆಯ ದಿನವನ್ನು ಘೋಷಿಸಿತು. ನಾವು ಭಾರತಕ್ಕೆ ಬೇಟಿ ನೀಡಿದಾಗ ಯಾವಾಗಲೂ ಅವರನ್ನು ನೆನಪಿಸಿಕೊಳ್ಳುತ್ತೇನೆ ಎಂದು ನಿಕೋಲಸ್ ಮಡುರೊ ಆ ಸಮಯದಲ್ಲಿ ಹೇಳಿದ್ದರು.

ಶ್ರೀ ಸತ್ಯ ಸಾಯಿಬಾಬಾ ಯಾರು?

1926 ರಲ್ಲಿ ಜನಿಸಿದ ಶ್ರೀ ಸತ್ಯ ಸಾಯಿಬಾಬಾ, 14 ನೇ ವಯಸ್ಸಿನಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಗೌರವಿಸುವ 19 ನೇ ಶತಮಾನದ ಸಂತ ಶಿರಡಿ ಸಾಯಿಬಾಬಾ ಅವರ ಪುನರ್ಜನ್ಮ ಎಂದು ಹೇಳಿಕೊಂಡರು.
ಶ್ರೀ ಸತ್ಯ ಸಾಯಿ ಅಂತರರಾಷ್ಟ್ರೀಯ ಸಂಸ್ಥೆ ಇಂದು 120 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉಚಿತ ಆಸ್ಪತ್ರೆಗಳು, ಶಾಲೆಗಳು, ವಿಶ್ವವಿದ್ಯಾಲಯಗಳು, ನೀರಿನ ಯೋಜನೆಗಳು ಮತ್ತು ವಿಪತ್ತು-ಪರಿಹಾರ ಉಪಕ್ರಮಗಳನ್ನು ನಡೆಸುತ್ತಿದೆ. ವಿಶ್ವಾದ್ಯಂತ ಸುಮಾರು 2,000 ಸಾಯಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net