ಬಣ ರಾಜಕಾರಣದ ಬಿಸಿ ದೆಹಲಿಗೆ ಮುಟ್ಟುತ್ತಿದ್ದಂತೆಯೇ, ಹಿರಿಯ ನಾಯಕರು ಇದು ಚರ್ಚೆ ಎಂದು ಹೇಳುತ್ತಿದ್ದಾರೆ. ಚುನಾಯಿತ ಶಾಸಕರು ಮತ್ತು ಕೇಂದ್ರ ನಾಯಕತ್ವದ ಸಮಾಲೋಚನೆಯ ನಂತರವೇ ನಾಯಕನ ಆಯ್ಕೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಫಲಿತಾಂಶಕ್ಕೂ ಮುನ್ನವೇ ಶುರುವಾಗಿರುವ ಈ ಕುರ್ಚಿ ಕದನ ಯುಡಿಎಫ್ ಒಕ್ಕೂಟದ ಒಗ್ಗಟ್ಟಿಗೆ ಧಕ್ಕೆ ತರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ(ಏಜೆನ್ಸೀಸ್).