ನಿಮ್ಮನ್ನು 'ಡಿಜಿಟಲ್ ಅರೆಸ್ಟ್' ಮಾಡಲಾಗಿದೆ, ಕ್ಯಾಮೆರಾ ಮುಂದೆ ಕುಳಿತುಕೊಳ್ಳಬೇಕು ಮತ್ತು ಮನೆಯಿಂದ ಹೊರಬರುವಂತಿಲ್ಲ ಎಂದು ತಾಕೀತು ಮಾಡಿದ್ದರು. 10 ಗಂಟೆಗಳ ಕಾಲ ನಡೆದ ವಿಡಿಯೋ ಕಾಲ್ನಲ್ಲಿ, ನಕಲಿ ಬಂಧನದ ವಾರೆಂಟ್ ಪ್ರದರ್ಶಿಸಿದರು. ದಂಪತಿಗಳಿಗೆ ಕರೆ ಮಾಡಿ ಬೆದರಿಕೆ ಹಾಕಿ, ಮಾನಸಿಕ ಕಿರುಕುಳ ನೀಡಲಾಯಿತು. ವಿಚಾರಣೆ ಸಂಪೂರ್ಣ ಪೂರ್ಣಗೊಳ್ಳುವವರೆಗೂ ಮನೆಯಿಂದ ಹೊರಗೆ ಹೋಗಬಾರದು. ವಿಡಿಯೋ ಕರೆಗೆ ಸ್ಪಂದಿಸಬೇಕು. ಊಟ ಮಾಡುವುದು, ನಿದ್ದೆ ಮಾಡುವುದು ಎಲ್ಲವೂ ಕಣ್ಮುಂದೆಯೇ ಆಗಬೇಕು ಎಂದು ವಂಚಕರು ತಿಳಿಸಿದ್ದಾರೆ.