ಹಾವಿಗೂ ಆಪರೇಷನ್...! 80 ಹೊಲಿಗೆಗಳು; ಮಧ್ಯಪ್ರದೇಶದ ವೈದ್ಯರಿಂದ ನಾಗರಹಾವಿಗೆ ಶಸ್ತ್ರಚಿಕಿತ್ಸೆ Cobra

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಧ್ಯಪ್ರದೇಶ: ರಸ್ತೆ ನಿರ್ಮಾಣ ಕಾರ್ಯ ನಡೆಯುವಂತ ಸಮಯದಲ್ಲಿ ಗಾಯಗೊಂಡಿದ್ದ ನಾಗರಹಾವನ್ನು (Cobra) ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ರಕ್ಷಿಸಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬುಧವಾರ (ನ.26) ನಡೆದಿದೆ.
ರಸ್ತೆ ಅಗೆಯುವ ಕಾರ್ಯಾಚರಣೆ ಸಮಯದಲ್ಲಿ, ಜೆಸಿಬಿ ಆಕಸ್ಮಿಕವಾಗಿ ಹಾವಿನ ಮೇಲೆ ಡಿಕ್ಕಿ ಹೊಡೆದಿದೆ. ಈ ಸಮಯದಲ್ಲಿ ಅದಕ್ಕೆ ಗಂಭೀರ ಗಾಯವಾಗಿತ್ತು. ಅದನ್ನು ನೋಡಿದ ಸ್ಥಳೀಯರು ಭಯದಿಂದ ಮಣ್ಣನ್ನು ಎತ್ತಿ ಹಾವಿನ ಮೇಲೆ ಹಾಕಿದ್ದಾರೆ. ನಂತರ ಹಾವಿನ ರಕ್ಷಕರನ್ನು ಸ್ಥಳಕ್ಕೆ ಕರೆಸಿದ್ದಾರೆ.
ಘಟನಾ ಸ್ಥಳಕ್ಕೆ ಹಾವಿನ ರಕ್ಷಕರು ಆಗಮಿಸಿದ್ದು, ಗಾಯಗೊಂಡ ನಾಗಹಾವನ್ನು ಸುರಕ್ಷಿತವಾಗಿ ಉದಯನ್ ಮಾರ್ಗದಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಗೆ ಸಾಗಿಸಿದ್ದಾರೆ.
ಪಶುವೈದ್ಯಕೀಯ ಶಸ್ತ್ರಚಿಕಿತ್ಸಕ ಡಾ. ಮುಖೇಶ್ ಜೈನ್ ಮತ್ತು ಅಧಿಕಾರಿಗಳಾದ ರಾಮಕನ್ಯಾ ಗೌರವ್, ರವಿ ರಾಥೋಡ್ ಮತ್ತು ಪ್ರಶಾಂತ್ ಪರಿಹಾರ್ ಸೇರಿದಂತೆ ಅವರ ತಂಡವು, ನಾಗರಹಾವಿನ ತಲೆ ಮತ್ತು ಬೆನ್ನಿನ ಮೇಲೆ ಆಳವಾದ ಗಾಯಗಳಾಗಿರುವುದನ್ನು ಗಮನಿಸಿದ್ದಾರೆ.
ನಂತರ ಹಾವಿಗೆ ಪ್ರಮುಖ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಅರಿತುಕೊಂಡ ವೈದ್ಯರ ತಂಡವು ವಿಶೇಷ ಔಷಧಿಗಳನ್ನು ವ್ಯವಸ್ಥೆ ಮಾಡಿ, ಶಸ್ತ್ರಚಿಕಿತ್ಸೆಯನ್ನು ಆರಂಭಿಸಿದ್ದಾರೆ.
ಸತತ 2 ಗಂಟೆಗಳ ಕಾಲ ವೈದ್ಯರು ಹಾವಿನ ಹರಿದ ಚರ್ಮ ಮತ್ತು ಸ್ನಾಯುಗಳ ಮೇಲೆ 80 ಹೊಲಿಗೆಗಳನ್ನು ಹಾಕಿ, ಹಾವಿನ ಜೀವವನ್ನು ಉಳಿಸಿ, ಅದನ್ನು ಉರುಗ ರಕ್ಷಕರಿಗೆ ಹಸ್ತಾಂತರಿಸಿದ್ದಾರೆ. ಇನ್ನು ಎರಡು ದಿನಗಳ ವೀಕ್ಷಣೆಯ ನಂತರ ಹಾವನ್ನು ಕಾಡಿಗೆ ಬಿಡಲಾಗುತ್ತದೆ ಎಂದು ರಕ್ಷಕರು ಮಾಹಿತಿ ನೀಡಿದ್ದಾರೆ.
ಗಾಯಗೊಂಡ ಹಾವು ಎಲಾಪಿಡೆ ಕುಟುಂಬಕ್ಕೆ ಸೇರಿದ್ದು ಎಂದು ಡಾ. ಜೈನ್ ದೃಢಪಡಿಸಿದರು, ಇದರಲ್ಲಿ ಹಲವಾರು ಜಾತಿಯ ನಾಗರಹಾವುಗಳು ಸೇರಿವೆ ಎಂದಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net