ಈ ಪ್ರಕರಣದಲ್ಲಿ ಉದ್ಯಮಿ ಸತೀಶ್ ಮಂದಾಡೆ, ಮಾಜಿ ಕಾರ್ಪೊರೇಟರ್ ಮೋಹನ್ ಶುಕ್ಲಾ, ಪರಸ್ಮಲ್ ಜೈನ್, ಮಾಜಿ ಅಬಕಾರಿ ಇನ್ಸ್‌ಪೆಕ್ಟರ್ ಶಶಿಕಾಂತ್ ಕುಲಕರ್ಣಿ, ಬಿಎಸ್‌ಪಿ ಕಾರ್ಯಕರ್ತ ಕೈಲಾಶ್ ಯಾದವ್ ಮತ್ತು ಶೂಟರ್‌ಗಳಾದ ದಿನೇಶ್ ತಿವಾರಿ, ಪಿಂಟು ಸಿಂಗ್ ಹಾಗೂ ಛೋಟೆ ಪಾಂಡೆ ಅವರನ್ನು ಇತರ ಆರೋಪಿಗಳೆಂದು ಹೆಸರಿಸಲಾಗಿತ್ತು. ಕಳೆದ 20 ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘ ವಿಚಾರಣೆ ನಡೆದಿರುವ ಈ ಪ್ರಕರಣದ ತೀರ್ಪನ್ನು ವಿಶೇಷ ಸಿಬಿಐ ನ್ಯಾಯಾಲಯವು ಮಂಗಳವಾರ ನೀಡಬೇಕಿತ್ತು, ಆದರೆ ಅದನ್ನು ಈಗ ಶನಿವಾರಕ್ಕೆ ಮುಂದೂಡಲಾಗಿದೆ. ಆರೋಪಿಗಳು ಮತ್ತು ಸಂತ್ರಸ್ತರು ಪ್ರಭಾವಿ ರಾಜಕೀಯ ಹಿನ್ನೆಲೆಯುಳ್ಳವರಾಗಿರುವುದರಿಂದ, ಈ ತೀರ್ಪು ಮಹಾರಾಷ್ಟ್ರ ರಾಜಕಾರಣದ ಮೇಲೆ ಭಾರಿ ಪರಿಣಾಮ ಬೀರುವ ನಿರೀಕ್ಷೆಯಿದೆ(ಏಜೆನ್ಸೀಸ್).