ಪಶ್ಚಿಮ ಬಂಗಾಳದ ತಾರಾಪೀಠದ ಹೋಟೆಲ್‌ನಲ್ಲಿ ಅಗ್ನಿ ಅವಘಡ: 7 ಮಂದಿ ಸಾವು, ಹಲವರಿಗೆ ಗಂಭೀರ ಗಾಯ

 Tarapith hotel fire seven dead
Tarapith hotel fire seven dead
Published on

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ ಬಂಗಾಳದ ಹಿರಭೂಮ್ ಜಿಲ್ಲೆಯ ತಾರಾಪೀಠದಲ್ಲಿರುವ ಹೋಟೆಲ್‌ನಲ್ಲಿ ಬೆಂಕಿ.
  • ನಸುಕಿನ ಜಾವ ಸುಮಾರು 4:30 ರಿಂದ 5:00 ರ ಸುಮಾರಿಗೆ ನಡೆದ ಘಟನೆ.
  • ಗಾಯಗೊಂಡವರನ್ನು ರಾಂಪುರಹತ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಶ್ಚಿಮ ಬಂಗಾಳ: ಇಲ್ಲಿನ ಬೀರ್​ಭೂಮ್ ಜಿಲ್ಲೆಯ ತಾರಾಪೀಠದಲ್ಲಿ ಭೀಕರ ಅಗ್ನಿ ಅವಘಡ (

Tarapith hotel

)

ಸಂಭವಿಸಿದೆ. ಘಟನೆಯಿಂದಾಗಿ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

ಯಾತ್ರಾ ಸ್ಥಳ ಮತ್ತು ತಾರಾಪೀಠ ಪೊಲೀಸ್​ ಠಾಣೆಗೆ ಸಮೀಪವಿರುವ ನಾಲ್ಕು ಅಂತಸ್ತಿನ ಹೋಟೆಲ್ ಬಿದೇಶಿನಿಯ ನೆಲಮಹಡಿಯಲ್ಲಿ ಬೆಳಗ್ಗೆ ಸುಮಾರು 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡ ವೇಳೆ ಹೋಟೆಲ್‌ನಲ್ಲಿದ್ದ ಬಹುತೇಕ ಮಂದಿ ಗಾಢ ನಿದ್ರೆಯಲ್ಲಿದ್ದರು ಎನ್ನಲಾಗಿದೆ.

ಬೆಂಕಿ ನೆಲಮಹಡಿಯಲ್ಲಿ ಹತ್ತಿಕೊಳ್ಳುತ್ತಲೇ ಕಟ್ಟಡ ಪೂರ್ತಿ ಹಬ್ಬಿದೆ. ದಟ್ಟ ಹೊಗೆ ತುಂಬಿಕೊಂಡಿದ್ದರಿಂದ ಭಕ್ತಾದಿಗಳ ಉಸಿರಾಟಕ್ಕೂ ಸಮಸ್ಯೆಯುಂಟಾಗಿತ್ತು.

ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹರಸಾಹಸಪಟ್ಟು ಬೆಂಕಿ ನಿಂದಿಸಲು ಯತ್ನಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಹೊರತೆಗೆದು ರಾಂಪುರಹಾಟ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಭಕ್ತರಿಂದ ಕೂಡಿದ್ದ ತಾರಾಪೀಠ

ಇಂದು ಶ್ರಾವಣ ಮಾಸದ ಸೋಮವಾರವಾಗಿರುವ ಕಾರಣ ತಾರಾ ಪೀಠದಲ್ಲಿ ಭಕ್ತರ ಸಂಖ್ಯೆ ದುಪ್ಪಟ್ಟು ಇತ್ತು. ಹೀಗಾಗಿ ದೇವಾಲಯದ ಸುತ್ತಮುತ್ತಲಿನ ಹೋಟೆಲ್​ಗಳು ತುಂಬಿದ್ದವು. ಹೋಟೆಲ್ ಆಡಳಿತ ಮಂಡಳಿ ಹಂಚಿಕೊಂಡ ಮಾಹಿತಿ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಆದರೆ ನಿಖರ ಕಾರಣವನ್ನು ಅಧಿಕಾರಿಗಳು ಇನ್ನಷ್ಟೇ ಪತ್ತೆಹಚ್ಚಬೇಕಿದೆ ಎಂದು ಹೇಳಿದರು.
ಅಗ್ನಿಶಾಮಕ ಇಲಾಖೆಯ ಪ್ರಾಥಮಿಕ ವರದಿಯ ಪ್ರಕಾರ, ಹೋಟೆಲ್‌ನಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣದಿಂದಾಗಿ ಈ ಭೀಕರ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net