ನಿರ್ಮಾಣ ಹಂತದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಭೀಕರ ದುರಂತ: ಉಸಿರುಗಟ್ಟಿ ಆರು ಮಂದಿ ದುರ್ಮರಣ! | septic tank

ಘಟನೆಯ ಸ್ಥಳ
ಘಟನೆಯ ಸ್ಥಳ
Published on
ಭುವನೇಶ್ವರ: ಒಡಿಶಾದ ಕಲಾಹಂಡಿ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೆಪ್ಟಿಕ್ ಟ್ಯಾಂಕ್‌(septic tank) ಒಳಗೆ ಇಳಿದ ಆರು ಮಂದಿ ಉಸಿರುಟ್ಟಿ ಮೃತಪಟ್ಟಿರುವ ಘಟನೆ ಮಂಗಳವಾರ(ಮೇ 26) ಬೆಳಗ್ಗೆ ನಡೆದಿದೆ ಎಂದು ವರದಿಯಾಗಿದೆ.
ಜಿಲ್ಲೆಯ ಮಾಧನ್‌ಪುರ-ರಾಂಪುರ ಬ್ಲಾಕ್‌ನ ಗೌಡ ಕುರ್ಲಾಮ್ ಕುಂಟಾ ಗ್ರಾಮದ ಮನೆಯೊಂದರಲ್ಲಿ ಹೊಸ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲಾಗುತ್ತಿದ್ದು, ಈಗಾಗಲೇ ಸೆಂಟ್ರಿಂಗ್ ಮುಗಿದಿದ್ದು, ಸ್ಲ್ಯಾಬ್ ಹಾಕಲಾಗಿದೆ. ಇಂದು ಬೆಳಿಗ್ಗೆ, ಸೆಂಟ್ರಿಂಗ್ ಮೇಸ್ತ್ರಿಯೊಬ್ಬರು ಸೆಂಟ್ರಿಂಗ್ ವಸ್ತುಗಳನ್ನು ಹೊರತರಲು ಒಳಗೆ ಹೋಗಿದ್ದಾರೆ.
ಈ ವೇಳೆ ಒಳಗಿದ್ದ ವಿಷಕಾರಿ ಅನಿಲದಿಂದ ಉಸಿರಾಟದ ತೊಂದರೆ ಬಳಿಕ ಪ್ರಜ್ಞೆ ಕಳೆದುಕೊಂಡಿದ್ದಾರೆ. ಅವರನ್ನು ರಕ್ಷಿಸಲು ಇತರ ಇಬ್ಬರು ಮೇಸ್ತ್ರಿಗಳು ಮತ್ತು ಇಬ್ಬರು ಕಾರ್ಮಿಕರು ಒಳಗೆ ಹೋಗಿದ್ದಾರೆ. ಬಳಿಕ ಮನೆಯ ಮಾಲೀಕ ನಿಮೈ ಪಾಲ್ ಮತ್ತು ಅವರ ಮಗ ಆಕಾಶ್ ಪಾಲ್ ಕೂಡ ಸೆಪ್ಟಿಕ್ ಟ್ಯಾಂಕ್ ಒಳಗೆ ಇಳಿದಿದ್ದಾರೆ. ಲ್ಲರೂ ಪ್ರಜ್ಞೆ ತಪ್ಪಿ ಅದರೊಳಗೆ ಬಿದ್ದಿದ್ದಾರೆ.
ವಿಷಯ ತಿಳಿದ ಗ್ರಾಮಸ್ಥರು ತಕ್ಷಣ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಒಳಗಿದ್ದವರನ್ನು ಹೊರತೆಗೆದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಿದಿದ್ದಾರೆ. ಆದಾಗ್ಯೂ, ಅವರಲ್ಲಿ ಆರು ಮಂದಿ ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿರುವ ಸಿಎಂ ಮೋಹನ್ ಚರಣ್ ಮಾಝಿ, ಮೃತರಿಗೆ ಸಂತಾಪ ಸೂಚಿಸಿದ್ದು, ಕುಟುಂಬಸ್ಥರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 4 ಲಕ್ಷ ರೂ.ಗಳ ಆರ್ಥಿಕ ನೆರವು ಘೋಷಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net