ಪೊಲೀಸರ ಮಾಹಿತಿ ಪ್ರಕಾರ, ಡ್ರಾಮಂಡಗಂಜ್ ಪ್ರದೇಶದ ಕಣಿವೆ ಇಳಿಜಾರಿನಲ್ಲಿ ಈ ಅಪಘಾತ ಸಂಭವಿಸಿದೆ. ಇಳಿಜಾರಿನಲ್ಲಿ ಬರುತ್ತಿದ್ದ ಟ್ರಕ್‌ನ ಬ್ರೇಕ್ ವೈಫಲ್ಯಗೊಂಡಿದ್ದು, ನಿಯಂತ್ರಣ ತಪ್ಪಿದ ವಾಹನ ಮುಂದೆ ಸಾಗುತ್ತಿದ್ದ ಮತ್ತೊಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ನಡುವೆ ಕಾರೊಂದು ಎರಡು ಟ್ರಕ್‌ಗಳ ನಡುವೆ ಸಿಲುಕಿಕೊಂಡು ಭಾರೀ ಹಾನಿಗೊಳಗಾಯಿತು.